ಕುಂಬ್ರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

0

ಪುತ್ತೂರು: ಕುಂಬ್ರ ಗ್ರಾಮಾಂತರ ಉಪವಿಭಾಗ ಕಛೇರಿಯಲ್ಲಿ ಮೆಸ್ಕಾಂ ಪುತ್ತೂರು ಗ್ರಾಮಾಂತರ, ನಗರ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ಅ.20 ರಂದು ನಡೆಯಿತು. ದೂರವಾಣಿ ಮೂಲಕ ಗ್ರಾಮಸ್ಥರು ತಮ್ಮ ಬೇಡಿಕೆ, ಸಮಸ್ಯೆಗಳನ್ನು ಕಛೇರಿಗೆ ತಿಳಿಸಿದರು ಅಲ್ಲದೆ ಅರ್ಜಿಗಳನ್ನು ನೀಡಿದರು. ಗ್ರಾಹಕರ ಬೇಡಿಕೆ, ಸಮಸ್ಯೆಗಳನ್ನು ಆಯಾ ಕಿರಿಯ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ದಾಖಲಿಸಿಕೊಂಡರು. ಈ ಸಂದರ್ಭದಲ್ಲಿ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಸಂತ್ ಕೆ, ಸಹಾಯಕ ಇಂಜಿನಿಯರ್ ನಿತಿನ್, ಪುತ್ತೂರು ವಿಭಾಗದ ಕಿರಿಯ ಇಂಜಿನಿಯರ್ ಸುಂದರ ಕೆ, ಬನ್ನೂರು ಕಿರಿಯ ಇಂಜಿನಿಯರ್ ವೀರಾ ನಾಯ್ಕ, ಬೆಟ್ಟಂಪಾಡಿ ಕಿರಿಯ ಇಂಜಿನಿಯರ್ ಪುತ್ತು ಕೆ, ಈಶ್ವರಮಂಗಲ ಕಿರಿಯ ಇಂಜಿನಿಯರ್ ರಮೇಶ್ ಕೆ, ಸವಣೂರು ಕಿರಿಯ ಇಂಜಿನಿಯರ್ ರಾಜೇಶ್ ಕೆ, ಸಹಾಯಕ ತಾಂತ್ರಿಕ ಇಂಜಿನಿಯರ್ ಗುರುದೇವಿ, ತಾಂತ್ರಿಕ ಸಹಾಯಕ ಇಂಜಿನಿಯರ್ ಸವಿತಾ, ಕುಂಬ್ರ ಕಿರಿಯ ಇಂಜಿನಿಯರ್ ರವೀಂದ್ರ, ಕುಂಬ್ರ ಮೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ ರಜನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here