ವಿಟ್ಲ: ಅಕ್ರಮವಾಗಿ ಜಾನುವಾರು ಸಾಗಾಟ – ಮೂವರ ಬಂಧನ

0

ವಿಟ್ಲ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಾಹನ ಸಹಿತ ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಾಣಿಲ ಗ್ರಾಮದ ಮುರುವ ಎಂಬಲ್ಲಿ ನಡೆದಿದೆ.ಜಾಫರ್ ಸಾದೀಕ್‌ ,ಹಕೀಂ ಹಾಗೂ ಅಬ್ದುಲ್‌ ಜಲಾಲ್‌ ಬಂಧಿತ ಆರೋಪಿಗಳು.

ಮಾಣಿಲ ಗ್ರಾಮದ ಮುರುವ ಎಂಬಲ್ಲಿ ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ವಿಟ್ಲ ಠಾಣಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಪಿಕಪ್ ನಲ್ಲಿದ್ದ ಒಂದು ಗಂಡು ಕರು ಹಾಗೂ ಕೃತ್ಯಕ್ಕೆ ಬಳಸಿದ ಪಿಕ್‌ಅಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here