ಪುತ್ತೂರು: ಶ್ರಮ, ಸೇವೆ, ಸಹಾಯ ಎಂಬ ಧ್ಯೇಯದೊಂದಿಗೆ ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ ಇದರ ವತಿಯಿಂದ ದಿ. ಜಯಂತಿ ಮಜ್ಜಾರ್ ಇವರ ಸ್ಮರಣಾರ್ಥ 6 ನೇ ವರ್ಷದ ಕೆಸರಡೊಂಜಿ ದಿನ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಯಾಂಪ್ ಬ್ಲೆಡ್ ಸೆಂಟರ್ ಪುತ್ತೂರು ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರ – ಸನ್ಮಾನ -ಸಹಾಯಧನ ವಿತರಣೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಅಂಧತ್ವ ವಿಭಾಗ ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು. ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವುಗಳ ಸoಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿ ಇದರ ವತಿಯಿಂದ ಉಚಿತ ಶುಗರ್ ಮತ್ತು ಬಿ. ಪಿ ತಪಾಸಣಾ ಶಿಬಿರ ಅ.22 ರಂದು ಮಜ್ಜಾರಡ್ಕದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಾ| ರಾಮಚಂದ್ರ ಭಟ್, ರೋಟರಿ ಬ್ಲಡ್ ಸೆಂಟರ್ ಪುತ್ತೂರು ಇವರು ಉದ್ಘಾಟನೆ ಮಾಡಿ ರಕ್ತದಾನ ಮಾಡುವ ಮತ್ತು ರಕ್ತದ ಅಗತ್ಯದ ಬಗ್ಗೆ ಮಾಹಿತಿ ನೀಡಿದರು, ವೇದಿಕೆಯಲ್ಲಿ ಸಂಘಟನೆಯ ಗೌರವ ಸಲಹೆಗರಾರದ ಕಿಶೋರ್ ಶೆಟ್ಟಿ ಅರಿಯಡ್ಕ, ಉದ್ಯಮಿಗಳು ಬೆಂಗಳೂರು, ತಾಲೂಕು ಆರೋಗ್ಯ ಅಧಿಕಾರಿ, ಡಾ| ದೀಪಕ್ ರೈ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ರೈ ಗೋಲ್ತಿಲ, ಸಂಘಟನೆ ಗೌರವ ಸಹಾಲೆಗಾರ ನಾರಾಯಣ ಪೂಜಾರಿ ಮಡ್ಯಂಗಳ , ಸಂಘಟನೆ ಉಪಾಧ್ಯಕ್ಷ ಯತೀಶ್ ಕೋಡಿಯಡ್ಕ, ಹಾಗೂ ದಿ ಜಯಂತಿ ಮಜ್ಜಾರ್ ಇವರ ಮಗ ಗುರುಪ್ರಸಾದ್ ಮಜ್ಜಾರ್, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಆಕಸ್ಮಿಕವಾಗಿ ಗಾಯಗೊಂಡ ಪರಮೇಶ್ವರ್ ಇರ್ದೆ ಇವರಿಗೆ ಸಂಘಟನೆವತಿಯಿಂದ ಸಹಾಯ ನಿಧಿ ವಿತರಿಸಲಾಯಿತು. 25 ನೇ ಪ್ರಾಯದಲ್ಲಿ 28 ಬಾರಿ ರಕ್ತದಾನ ಮಾಡಿದ ಚರಣ್ ರೈ ಮಠ ಇವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಶಿಬಿರದ ಪ್ರಯೋಜನವನ್ನು ಊರವರು ಪಡೆದುಕೊಂಡರು, ಮಹಿಳೆಯರು ಮತ್ತು ಯುವಕರು ರಕ್ತದಾನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ಸಂಘಟನೆಯ ಗೌರವ ಅಧ್ಯಕ್ಷರಾದ ಒಲೆಮುಂಡೋವು ಮೋಹನ್ ರೈ ನೀಡಿದ್ದರು. ಆದ್ಯಾ ಆರ್.ಜೆ ಗೋಳ್ತಿಲ ಸ್ವಾಗತಿಸಿ, ದೀಪಕ್ ಕೋಡಿಯಡ್ಕ ಪ್ರಾರ್ಥಿಸಿದರು. ಸಂಘಟಕ ರಾಜೇಶ್ ಕೆ ಮಯೂರ ವಂದಿಸಿದರು. ಕೀರ್ತಿ ಮಾವಿಲಾಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು.