ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳಲ್ಲಿ ಆಯುಧ ಪೂಜಾ ಪ್ರಯುಕ್ತ ಆಶೀರ್ವಚನ ಕಾರ್ಯಕ್ರಮ

0

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ವ್ಯವಹರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳಾದ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್(ಜಂಟ್ಸ್ & ಲೇಡೀಸ್), ತ್ರಿಸಿಕ್ಸ್ಟಿ ಫ್ಯಾಮಿಲಿ ಬಾರ್ ಆಂಡ್ ರೆಸ್ಟೋರೆಂಟ್, ಕ್ರಿಸ್ಟೋಫರ್ ಪೆಡಲ್ಸ್ ಆಂಡ್ ಫಿಟ್ನೆಸ್ ಸೆಂಟರ್, ಅಮೇಜಿಂಗ್ ಬೈಕ್ಸ್ ಸಂಸ್ಥೆಯಲ್ಲಿ ಆಯುಧ ಪೂಜಾ ಪ್ರಯುಕ್ತ ಆಶೀರ್ವಚನ ಕಾರ್ಯಕ್ರಮ ಅ.24 ರಂದು ನೆರವೇರಿತು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಸಂಸ್ಥೆಗಳಿಗೆ ಪವಿತ್ರ ಜಲ ಸಿಂಪಡಿಸಿ ಮಾತನಾಡಿ, ದೇವರಲ್ಲಿ ವಿಶ್ವಾಸವಿರಿಸಿದಾಗ ಯಾವುದೇ ಉದ್ಯಮವು ಯಶಸ್ವಿಯಾಗಬಲ್ಲುದು ಎಂದು ಹೇಳಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಪುತ್ತೂರು ಪುರಸಭಾ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಒಲಿವರ್ ರೆಬೆಲ್ಲೋ, ಸೂರಜ್ ರೆಬೆಲ್ಲೋ, ನವನೀತ್ ಬಜಾಜ್, ಲೂವಿಸ್ ಫೆರ್ನಾಂಡೀಸ್, ರೋಯಿಸ್ಟನ್ ಡಾಯಸ್, ದೀಪಕ್ ಡಾಯಸ್, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್, ನಿರ್ದೇಶಕ ಮನೋಜ್ ಡಾಯಸ್, ನೀಶಾ ಮಸ್ಕರೇನ್ಹಸ್, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಸಿಬ್ಬಂದಿ ವರ್ಗ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here