ಪುತ್ತೂರು: ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.15ರಿಂದ ಅ.23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ನಡೆಯಿತು. ಪ್ರತಿದಿನ ರಾತ್ರಿ 7 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಅ.15ರಂದು ಬೆಳಿಗ್ಗೆ 10.30ಕ್ಕೆ ಶ್ರೀ ದೇವರ ಗದ್ದಿಗೆ ಏರುವ ಮೂಲಕ ಆರಂಭಗೊಂಡು ಅ.23ರವರೆಗೆ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೈದಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಅ.19ರಂದು ನಡೆದ ಮೂಡಾಯೂರು ಬಳಗದ ಸ್ಯಾಕ್ಸೋಫೋನ್ ವಾದನ ಭಕ್ರವೃಂದದ ಮನಸೆಳೆಯಿತು. ಅ.23ರಂದು 8.30ಕ್ಕೆ ಕೊಪ್ಪರಿಗೆ ಏರಿದ ಬಳಿಕ ಭಜನಾ ಕಾರ್ಯಕ್ರಮ, ಮಧ್ಯಾಹ್ನದ ಮಹಾಪೂಜೆ, ದರ್ಶನ ಪಾತ್ರಿಯವರಿಂದ ಶ್ರೀ ದೇವಿ ದರ್ಶನ ಮತ್ತು ಅಭಯ ನುಡಿ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಯು. ಲೋಕೇಶ ಹೆಗ್ಡೆ, ಕ್ಷೇತ್ರದ ಧರ್ಮದರ್ಶಿ, ಸಂಚಾಲಕ ಕೆ. ರಾಜಣ್ಣ, ಕೋಶಾಧಿಕಾರಿ ದಿನೇಶ ಕರ್ಮಲ, ಪ್ರಧಾನ ಕಾರ್ಯದರ್ಶಿ ದಿನಕರ ಗೌಡ ಬುಡ್ಲೆಗುತ್ತು, ಉಪಾಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಗೌರವಾಧ್ಯಕ್ಷ ಚಂದ್ರಹಾಸ ಎಂ. ರೈ, ಬಾಳಿಕೆ ಮನೆ, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಿಎಸ್‌ಐ, ಉಪ್ಪಿನಂಗಡಿ, ಉತ್ಸವ ಸಮಿತಿ ಉಪಾಧ್ಯಕ್ಷ ಮಹಾಲಿಂಗ ಪಾಟಾಳಿ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ ಕರ್ಮಲ, ಕಾರ್ಯದರ್ಶಿ ಗಣೇಶ್ ಕರ್ಮಲ, ಉತ್ಸವ ಸಮಿತಿ ಜೊತೆ ಕಾರ್ಯದರ್ಶಿ ತಾರನಾಥ ಬನ್ನೂರು, ಶಿವಶಂಕರ ಕರ್ಮಲ, ದೀಕ್ಷಿತ್ ಆರ್.ಕೆ. ಕರ್ಮಲ ಉಪಸ್ಥಿತರಿದ್ದರು.