ಕುಕ್ಕಟ್ಟೆ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಪೂಜಾ ಮಹೋತ್ಸವ

0

ಕಾಣಿಯೂರು: ಮುರುಳ್ಯ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವವು ಅ.15ರಿಂದ ಅ.23ರವರೆಗೆ ನಡೆಯಿತು. ದೇವಿಗೆ ವಿಶೇಷ ಪೂಜೆ, ದುರ್ಗಾ ಹೋಮ, ಮಹಾಪೂಜೆ, ಭಜನೆ, ಕುಣಿತ ಭಜನೆ, ವಾಹನ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಯ ಮೊಕ್ತೇಸರರು, ಆಡಳಿತ ಸಮಿತಿ ಪದಾಧಿಕಾರಿಗಳು, ಜೀರ್ಣೋದ್ಧಾರ, ಬ್ರಹ್ಮಕಲೋತ್ಸವ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here