ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ

0

ಉಪ್ಪಿನಂಗಡಿ: ಗಯಾಪದ ಕ್ಷೇತ್ರವಾದ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು, ನವರಾತ್ರಿ ಪೂಜೆಯೊಂದಿಗೆ ವಿಶೇಷವಾಗಿ 9 ದಿನಗಳಲ್ಲಿ ನವದುರ್ಗಾ ಕಲ್ಪೋಕ್ತವಿಧಿ ಪೂಜೆ ಹಾಗೂ ಶ್ರೀ ಕಾಳಿಕಾಂಭ ಭಜನಾ ಮಂಡಳಿಯವರಿಂದ ಭಜನಾ ಸೇವೆ 9 ದಿನಗಳಲ್ಲಿ ರಾತ್ರಿ ನಡೆಯಿತು.


ಕಲ್ಪೋಕ್ತವಿಧಿ ಪೂಜೆಗಳಾದ ದುರ್ಗಾ ಪೂಜೆ, ಅರ್ಯಾಪೂಜೆ, ಭಗವತೀ ಪೂಜೆ, ಕುಮಾರೀ ಪೂಜೆ, ಅಂಬಿಕಾ ಪೂಜೆ, ಮಹಿಷಮರ್ದಿನೀ ಪೂಜೆ, ಚಂಡಿಕಾ ಪೂಜೆ, ಸರಸ್ವತೀ ಪೂಜೆ, ವಾಗೀಶ್ವರೀ ಪೂಜೆ ನಡೆದ 9 ದಿನಗಳಲ್ಲೂ ಶ್ರೀ ಮಹಾಕಾಳಿ ಅಮ್ಮನವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತಲ್ಲದೆ, ಎಲ್ಲಾ ದಿನಗಳಲ್ಲೂ ಅನ್ನ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಶ್ರೀ ಕಾಳಿಕಾಂಭ ಭಜನಾ ಮಂಡಳಿಯವರಿಂದ ಭಜನಾ ಸೇವೆಗಳು ನಡೆದವು. ವಿಜಯ ದಶಮಿಯ ದಿನ ಮಧ್ಯಾಹ್ನ ಶ್ರೀ ಕ್ಷೇತ್ರದಲ್ಲಿ ಹೊಸ ಅಕ್ಕಿ ಊಟ ನಡೆಯಿತು.


ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಹರಿರಾಮಚಂದ್ರ, ಜಯಂತ ಪೊರೋಳಿ, ಹರೀಶ ಉಪಾಧ್ಯಾಯ, ಸುನೀಲ್ ಎ., ಶ್ರೀಮತಿ ಹರಿಣಿ ಕೆ., ಶ್ರೀಮತಿ ಪ್ರೇಮಲತಾ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಪದ್ಮನಾಭ ಕುಲಾಲ್, ದಿವಾಕರ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here