ಪುತ್ತೂರು ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆ

0

ದಲಿತರ ಪರ ಕಾಳಜಿ ಇರುವುದು ಕಾಂಗ್ರೆಸ್ ಸರಕಾರಕ್ಕೆ ಮಾತ್ರ: ಅಶೋಕ್ ರೈ

ಪುತ್ತೂರು: ಪರಿಶಿಷ್ಡ ಪಂಗಡದ ಕುಟುಂಬಗಳ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಮಾಹಿತಿ ಕೊರತೆಯ ಕಾರಣಕ್ಕೆ ಹಲವರು ಸೌಲಭ್ಯ ವಂಚಿತರಾಗುತ್ತಿದ್ದಾರೆ, ದಲಿತರ ಪರ ಇರುವುದು ಕಾಂಗ್ರೆಸ್ ಸರಕಾರ ಮಾತ್ರ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಮತ್ತು ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದರು. ದಲಿತ ಕುಟುಂಬಗಳನ್ನು ಮೇಲಕ್ಕೆತ್ತಲು ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ನಂತರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವ ಕೆಲಸವನ್ನು ಮಾಡಿದೆ. ಪ್ರತೀಯೊಂದು ಕುಟುಂಬವೂ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಮಾಹಿತಿ ಕೊರತೆ ಇದ್ದವರು ಶಾಸಕರ ಕಚೇರಿಯನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದು ಎಂದು ಹೇಳಿದರು. ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದ ದಲಿತ ವರ್ಗಕ್ಕೆ ಸ್ಥಾನ ಮಾನವನ್ನು ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಇತಿಹಾಸ ಗೊತ್ತಿಲ್ಲದವರು ಈಗ ಏನೇನೋ ಮಾತನಾಡುತ್ತಾರೆ. ದಲಿತ ಬಂಧುಗಳು ಎಂದಿಗೂ ಕಾಂಗ್ರೆಸ್ ಪಕ್ಷವನ್ನು ಮರೆಯಬಾರದು ಎಂದು ಶಾಸಕರು ಹೇಳಿದರು.

ಪುತ್ತೂರು ಬ್ಲಾಕ್ ಎಸ್ ಟಿ ಘಟಕದ ಬ್ಲಾಕ್ ಅಧ್ಯಕ್ಷ ಮಹಾಲಿಂಗ ನಾಯ್ಕ ಮಾತನಾಡಿ, ಎಸ್ ಟಿ ಕುಟುಂಬದ ಮತ್ತು ಕನ್ವಶರ್ನ್ ಸಮಸ್ಯೆಯ ಬಗ್ಗೆ ಸಭೆಯಲಿ ವಿವರಿಸಿದರು. ಪರಿಶಿಷ್ಟ ವರ್ಗ ಸಮುದಾಯಕ್ಕೆ ಕಾಂಗ್ರೆಸ್ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೋಟ್ಯಂತರ ಕುಟುಂಬಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದೆ. ದೇಶದಲ್ಲಿ ಬಡ ದಲಿತ ಸಮುದಾಯವನ್ನು ಸಮಾಜದ ಮೇಲ್ಪಂಕ್ತಿಗೆ ತಂದದ್ದೇ ಕಾಂಗ್ರೆಸ್ ಆಗಿದ್ದು ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷ್ಯ ಮಾಡಬಾರದು ಕಾಂಗ್ರೆಸ್ ದೇಶದಲ್ಲಿ ತುಳಿತಕ್ಕೊಳಗಾದವರಿಗೆ ಬದುಕು ಕೊಟ್ಟಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಘಟಕದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಬ್ಲಾಕ್ ಉಪಾಧ್ಯಕ್ಷ ಮೌರಿಶ್ ಮಸ್ಕರೇನಸ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ, ಪಾಣಾಜೆ ಗ್ರಾಪಂ ಸದಸ್ಯೆ ವಿಮಲಾ, ಎಸ್ ಟಿ ಘಟಕದ ಉಪಾಧ್ಯಕ್ಷ ಸದಾನಂದ ನಾಯ್ಕ, ರಾಮನಾಯ್ಕ, ಯು ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಗ್ರಾಪಂ ಸದಸ್ಯ ಮಹಾಲಿಂಗ ನಾಯ್ಕ, ಸುಬ್ರಾಯ ನಾಯ್ಕ ನಿಡ್ಪಳ್ಳಿ, ಐತಪ್ಪ ನಾಯ್ಕ ನಿಡ್ಪಳ್ಳಿ, ನಾಗೇಶ್ ನಾಯ್ಕ ನಿಡ್ಪಳ್ಳಿ, ಸೀತಾರಾಮ ನಾಯ್ಕ, ಗೋಪಾಲ ನಾಯ್ಕ ಪಡುಮಲೆ, ಮೋಹಿನಿ ನರಿಮೊಗರು, ಕರುಣಾಕರ ಪಾಂಗಲಾಯಿ, ಗೋವಿಂದ ನಾಯ್ಕ ಮೊಟ್ಟೆತ್ತಡ್ಕ, ಸವಿತಾ ದೇವಸ್ಯ,ಚಂದ್ರಾವತಿ ಒಳಮೊಗ್ರು, ಮಾದವ ನಾಯ್ಕ ಬೊಳಿಂಜ, ಶಶಿಕಲಾ ಬೊಳಿಂಜ, ಗಿರಿಧರ್ ಗೌಡ, ಯೋಗೀಶ್ ಸಾಮಾನಿ, ರಾಘವ ಖಂಡಿಗ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ಭಂಡಾರಿ ಚಿಲ್ಮೆತ್ತಾರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here