
ಪುತ್ತೂರು:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದ ಪುತ್ತಿಲ ಪರಿವಾರ ಧಾರ್ಮಿಕ ಸೇವಾ ಘಟಕ ಕೆಯ್ಯೂರು ಇದರ ವತಿಯಿಂದ ನ.25ರಂದು ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಸಾರ್ವಜನಿಕ ದುರ್ಗಾಪೂಜಾ, ಶ್ರೀರಾಮ ತಾರಕ ಹವನ, ಹಾಗೂ ವಿವಿಧ ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ದಿವಾಕರ ಪೂಜಾರಿ ಪಲ್ಲತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಕಟ್ಟತ್ತಾರು, ಕಾರ್ಯಾಧ್ಯಕ್ಷರಾಗಿ ರಘುರಾಮ ಪಲ್ಲತ್ತಡ್ಕ ಹಾಗೂ ಗೌರವಾಧ್ಯಕ್ಷರಾಗಿ ಸುಬ್ರಾಯ ಭಟ್ ಪಲ್ಲತ್ತಡ್ಕ ಆಯ್ಕೆಯಾಗಿದ್ದಾರೆ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹಾಗೂ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತರವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ನಡೆಸಲಾಯಿತು. ಸಮಿತಿ ಉಪಾಧ್ಯಕ್ಷರಾಗಿ ಕಿಶೋರ್ ಭಟ್ ಅರ್ತ್ಯಡ್ಕ, ರಿತೇಶ್ ಪಾಟಾಳಿ, ಕೋಶಾಧಿಕಾರಿಯಾಗಿ ಸಂದೀಪ್ ಶೆಟ್ಟಿ ಸಣಂಗಳ ಹಾಗೂ ಜತೆ ಕಾರ್ಯದರ್ಶಿಯಾಗಿ ಜಯಂತ ಮಾಡಾವುರವರನ್ನು ಆಯ್ಕೆ ಮಾಡಲಾಯಿತು. ಸ್ವಾಗತ ಸಮಿತಿ ಸಂಚಾಲಕರಾಗಿ ಕೃಷ್ಣಮೂರ್ತಿ ಭಟ್ ಪಲ್ಲತ್ತಡ್ಕ, ಚಂದ್ರಶೇಖರ್ ರೈ ಇಳಂತಾಜೆ, ಲೋಕನಾಥ ಪಕ್ಕಳ ನೂಜಿ, ವೈದಿಕ ಸಮಿತಿ ಸಂಚಾಲಕರಾಗಿ ಗಣೇಶ ಭಟ್ ಕೈತ್ತಡ್ಕ, ಆಹಾರ ಸಮಿತಿ ಸಂಚಾಲಕರಾಗಿ ಶಶಿಧರ ಆಚಾರ್ಯ ಮಾಡಾವು, ಅಲಂಕಾರ ಸಮಿತಿ ಸಂಚಾಲಕರಾಗಿ ಬಾಲಕೃಷ್ಣ ಗೌಡ ಅಂಕತ್ತಡ್ಕ, ವೇದಿಕೆ ಸಮಿತಿ ಸಂಚಾಲಕರಾಗಿ ಶ್ರೀಪತಿ ಭಟ್ ಕೆಯ್ಯೂರು, ಸ್ವಯಂ ಸೇವಕ ಸಮಿತಿ ಸಂಚಾಲಕರಾಗಿ ಮನೋಜ್ ರೈ ಮಾಡಾವು, ಕ್ರೀಡಾ ಸಮಿತಿ ಸಂಚಾಲಕರಾಗಿ ಸುಶಾಂತ್ ಕೆಯ್ಯೂರುರವರನ್ನು ಆಯ್ಕೆ ಮಾಡಲಾಯಿತು.
ನ.25ರಂದು ನಡೆಯುವ ಕಾರ್ಯಕ್ರಮದಲ್ಲಿ ಬೆಳ್ಳಿಗ್ಗೆ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ, ಶ್ರೀರಾಮ ತಾರಕ ಹವನ, ಸಂಜೆ ದುರ್ಗಾಪೂಜೆ, ಧಾರ್ಮಿಕ ಸಭೆ, ಧಾರ್ಮಿಕ ಉಪನ್ಯಾನ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ 220 ಬೂತ್, 44 ಗ್ರಾಮಗಳು ಹಾಗೂ ನಗರ ಸಭೆಯ 31 ವಾರ್ಡ್‌ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.