ಆಲಂಕಾರು: ಆಲಂಕಾರು ಗ್ರಾ.ಪಂ ಆಲಂಕಾರು, ನೆಕ್ಕಿಲಾಡಿ, ನೈಯ್ಯಲ್ಗ,ಕೇಪುಳು ಬೈಲುಗಳ ಸಂಪರ್ಕ ರಸ್ತೆಯ ಬದಲಾವಣೆಗೆ ಆಲಂಕಾರು, ನೆಕ್ಕಿಲಾಡಿ, ನೈಯ್ಯಲ್ಗ ಬೈಲುಗಳ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಅಕ್ಷೇಪಣೆಯನ್ನು ಗ್ರಾ.ಪಂಗೆ ನೀಡಿದ್ದಾರೆ.
ಮಾಜಿ ಸೈನಿಕರ ಪರವಾಗಿ ಉಪೇಂದ್ರ ಕುಮಾರ್ ರವರು ಸರ್ವೆ ನಂಬರ್ 215 ರಲ್ಲಿ ಮಾಜಿ ಸೈನಿಕರಿಗೆ ಮಂಜೂರಾದ ಜಾಗದಲ್ಲಿ ರಸ್ತೆ ಬದಲಾವಣೆ ಹಾಗೂ ವಿದ್ಯುತ್ ಕಂಬ ಸ್ಥಳಾಂತರಿಸುವ ಕುರಿತು ತಹಶೀಲ್ದಾರರಿಗೆ ಮನವಿಯನ್ನು ನೀಡಿದ್ದರು. ಗ್ರಾ.ಪಂ ರಸ್ತೆ ಆದ ಹಿನ್ನೆಲೆಯಲ್ಲಿ ಈ ಮನವಿಯನ್ನು ತಹಶೀಲ್ದಾರರು ಮುಂದಿನ ಕ್ರಮಕ್ಕೆ ಗ್ರಾ.ಪಂ ಗೆ ಹಸ್ತಾಂತರಿಸಿದ್ದಾರೆ. ಗ್ರಾಮಸ್ಥರ ಮನವಿಯಲ್ಲಿ ನಾವು ಅನಾದಿಕಾಲದಿಂದ ಈ ರಸ್ತೆಯನ್ನು ಅನುಭವಿಸಿಕೊಂಡು ಬರುತ್ತಿದ್ದು. ಈ ರಸ್ತೆಗೆ ಗ್ರಾ.ಪಂ, ತಾ.ಪಂ, ಜಿ.ಪಂ ನಿಂದ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದು, ಮಳೆಗಾಲದಲ್ಲಿ ಗ್ರಾಮಸ್ಥರೆ ಈ ರಸ್ತೆಯನ್ನು ದುರಸ್ತಿ ಮಾಡುತ್ತಿದ್ದು ಈ ರಸ್ತೆಯನ್ನು ಯಾವೂದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಹಾಗೆ ಬದಲಾವಣೆ ಮಾಡಿದರೆ ಬಲವಾದ ವಿರೋಧ ಹಾಗೂ ಉಗ್ರ ಪ್ರತಿಭಟನೆ ಮಾಡುವುದಾಗಿ ಆಲಂಕಾರು, ನೆಕ್ಕಿಲಾಡಿ, ನೈಯ್ಯಲ್ಗ, ಕೇಪುಳು ಬೈಲುಗಳ ಗ್ರಾಮಸ್ಥರು, ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ರವರಿಗೆ ಮನವಿಯನ್ನು ನೀಡಿದ್ದಾರೆ ಹಾಗೂ ಈ ರಸ್ತೆಯ ಬದಿಯಲ್ಲಿ ಬ್ಯಾನರ್ ಕೂಡ ಅಳವಡಿಸಿದ್ದಾರೆ.