ಸುದಾನ ಶಾಲೆಯಲ್ಲಿ ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಅ.28ರಂದು ಸುದ್ದಿ ಬಿಡುಗಡೆ ಪತ್ರಿಕೆ ಸಹಯೋಗದಲ್ಲಿ ಮಳೆ ನೀರು ಕೊಯ್ಲಿನ ಬಗೆಗೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ಕಾರ್ಯಾಗಾರ ನಡೆಯಿತು. ಸುದ್ದಿ ಬಿಡುಗಡೆಯ ಪತ್ರಕರ್ತ ರವೀಶ್ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ನೀರಿನ ಅಭಾವ ಮತ್ತು ಅದಕ್ಕೆ ಕಾರಣಗಳು, ನೀರಿಂಗಿಸುವ ಕ್ರಮಗಳು, ಮಳೆ ನೀರಿನ ಕೊಯ್ಲು ಮಾಡುವ ವಿಧಾನ ಮುಂತಾದವುಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿದ್ದ ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕರಾದ ಡಾ. ಯು ಪಿ ಶಿವಾನಂದ ರವರು ಪ್ರಾತ್ಯಕ್ಷಿಕೆ ವಾಹನ ಸಹಿತ ಮಳೆ ನೀರನ್ನು ಸಂಗ್ರಹಿಸುವ, ಶುದ್ಧೀಕರಿಸುವ ಮತ್ತು ಸಂರಕ್ಷಿಸಿ ಬಳಸುವ ಕ್ರಮಗಳನ್ನು ವಿವರಿಸಿದರು. ವಿದ್ಯಾರ್ಥಿಗಳ ಜೊತೆಗೆ ಸಂವಾದವನ್ನು ನಡೆಸಿಕೊಟ್ಟರು. ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ, ನೀರು ಜೀವಾಮೃತ ಅದನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ಮಳೆ ನೀರು ಕೊಯ್ಲು ಮಾಡುವ ಅಗತ್ಯವನ್ನು ಅರಿತು ಪಾಲಿಸಬೇಕು ಎಂದು ಕರೆ ನೀಡಿದರು.

ಸುದ್ದಿ ಪತ್ರಿಕೆಯ ಪತ್ರಕರ್ತ ಹೊನ್ನಪ್ಪ ಗೌಡ, ಕುಶಾಲಪ್ಪ ಮತ್ತು ಶಾಲಾ ಸಂಯೋಜಕಿ ಪ್ರತಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದಾನ ಶಾಲೆಯ ಸಹಶಿಕ್ಷಕಿ ಶ್ಯಾಮಲಾ ಬಂಗೇರ ಧನ್ಯವಾದವನ್ನರ್ಪಿಸಿದರು, ಸಹ ಶಿಕ್ಷಕಿ ರೀನಾ ಕಾರ್ಯಕ್ರಮವನ್ನು ನಿರೂಪಿಸಿದರು. ಸುದಾನ ಶಾಲೆಯ ವಿಜ್ಞಾನ ಸಂಘ ಅವನಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

LEAVE A REPLY

Please enter your comment!
Please enter your name here