ಕರಾಯದಲ್ಲಿ ಅಪಘಾತ-ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

0

ಬೆಳ್ತಂಗಡಿ: ಕರಾಯ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ ಕುರಿತು ಬೆಳ್ತಂಗಡಿ ತಾಲೂಕಿನ ನಾಳ ಕಳಿಯ ಸಮೀಪದ ಗೋವಿಂದೂರು ನಿವಾಸಿ ಮಹಮ್ಮದ್ ಶಮೀರ್ (35 ವ)ಎಂಬವರ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ. 29ರಂದು ಸಂಜೆ ಸ್ಕೂಟರ್ ಸವಾರ ದಿನೇಶ್ ಪಿ. ಎಂಬವರು ಸ್ಕೂಟರ್‌ನಲ್ಲಿ ಅಜಿತ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಬಂದು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿನ ಕರಾಯ ಗ್ರಾಮದ ಕರಾಯ ಬಸ್ಸು ನಿಲ್ದಾಣದ ಬಳಿ ಗೋವಿಂದೂರು ನಿವಾಸಿ ಮಹಮ್ಮದ್ ಶಮೀರ್ ಎಂಬವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದಿಂದಾಗಿ ಎರಡೂ ವಾಹನಗಳ ಸವಾರರು ಹಾಗೂ ಸಹಸವಾರ ವಾಹನದೊಂದಿಗೆ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅಪಘಾತವನ್ನುಂಟು ಮಾಡಿದ ಸ್ಕೂಟರ್ ಸವಾರ ದಿನೇಶ್ ಪಿ. ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ 145/2023ರಂತೆ ಕಲಂ 279,337 ಐಪಿಸಿಯಡಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here