





ನೆಲ್ಯಾಡಿ: ಕಳೆದ 24 ವರ್ಷಗಳಿಂದ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತೆಯಾಗಿ ಸೇವೆಸಲ್ಲಿಸುತ್ತಿರುವ ರತ್ನಾಕುಮಾರಿ ಅವರು ಅ.31ರಂದು ನಿವೃತ್ತಿಯಾಗಲಿದ್ದಾರೆ.


ರಾಮಕುಂಜ ಗ್ರಾಮದ ಶಾರದಾನಗರ ನಿವಾಸಿ, ರಂಗ ಕಲಾವಿದ ಎ.ಎನ್.ಕೊಳಂಬೆಯವರ ಪತ್ನಿಯಾಗಿರುವ ರತ್ನಾಕುಮಾರಿಯವರು 1989ರಿಂದ 1999ರ ತನಕ ಕುಂಡಾಜೆ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ 1999ರಲ್ಲಿ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಸೇರ್ಪಡೆಗೊಂಡಿದ್ದರು. ಇಲ್ಲಿ ಸುಮಾರು 24ವರ್ಷಗಳ ಕಾಲ ಸೇವೆ ಸಲ್ಲಿಸಿರುವ ರತ್ನಾಕುಮಾರಿ ಅವರು ಅ.31ರಂದು ನಿವೃತ್ತರಾಗಲಿದ್ದಾರೆ.













