ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ- ವಿದ್ಯಾರ್ಥಿಗಳೇ ತಯಾರಿಸಿದ ವಸ್ತು ಮಾದರಿ ಪ್ರದರ್ಶನ

0

ಕಾಣಿಯೂರು: ಮಕ್ಕಳಲ್ಲಿ ಎಳವೆಯಲ್ಲಿಯೇ ವೈಜ್ಞಾನಿಕ, ಕ್ರಿಯಾತ್ಮಕ, ರಚನಾತ್ಮಕ ಕೌಶಲ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ವಿಭಿನ್ನ, ವಿಶಿಷ್ಟ, ವಿನೂತನ ಶೈಲಿಯ ಪ್ರಯೋಗಗಳ ಮೂಲಕ ಕಲಿಕೆಯ ಉತ್ಸಾಹವನ್ನು ಹೆಚ್ಚಿಸುತ್ತಾ ವಿದ್ಯಾರ್ಥಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಅಭಿರುಚಿಯನ್ನು ಮೂಡಿಸುತ್ತದೆ ಎಂದು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಹೇಳಿದರು.


ಅವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಪೋಷಕರ ಸಭೆ ಮತ್ತು ವಿದ್ಯಾರ್ಥಿಗಳೇ ತಯಾರಿಸಿದ ವಸ್ತು ಮಾದರಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆಯ ಮುಖ್ಯಗುರು ಸರಸ್ವತಿ ಎಂ ಮಾತನಾಡಿ, ಮಕ್ಕಳ ಅಂಕ ಗಳಿಕೆಯನ್ನು ಮಾತ್ರ ಪೋಷಕರು ಬಯಸದೆ ಅವರ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವಂತೆ ಸಂಸ್ಥೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರಬೇಕು ಎಂದರು. ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ನಿಯಮವನ್ನು ಪಾಲಿಸುತ್ತಾ ಸಂಸ್ಥೆಯಿಂದ ಕಲ್ಪಿಸಿಕೊಟ್ಟ ಎಲ್ಲಾ ಅವಕಾಶಗಳನ್ನು ಪರಿಪೂರ್ಣವಾಗಿ ಬಳಸಿಕೊಂಡರೆ ಯಶಸ್ಸು ಗಳಿಸುವುದು ನಿಶ್ಚಿತ ಎಂದರು.


ಸಭಾಧ್ಯಕ್ಷತೆಯನ್ನು ವಹಿಸಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ ಮಾತನಾಡಿ, ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆ ವಿಚಾರ ಎಂದರು. ಉಪಾಧ್ಯಕ್ಷೆ ಜ್ಞಾನೇಶ್ವರಿ ಬರೆಪ್ಪಾಡಿ ಅವರು ಶುಭ ಹಾರೈಸಿದರು. ಪೋಷಕ ಬಂಧು ಚಂದ್ರಶೇಖರ ಬರೆಪ್ಪಾಡಿ ಸಂಸ್ಥೆಯಲ್ಲಿ ನಡೆಸಿದ ವಸ್ತು ಮಾದರಿ ಪ್ರದರ್ಶನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಇಂತಹ ಅವಕಾಶಗಳಿಂದ ಮಕ್ಕಳ ಕನಸು ಪರಿಪೂರ್ಣ ಆಗಲು ಸಾಧ್ಯ ಅದಕ್ಕೆ ಹೆತ್ತವರು ಕೈಜೋಡಿಸಬೇಕು ಎಂದರು. ವಿದ್ಯಾರ್ಥಿನಿ ಈಶಿತ ಪ್ರಾರ್ಥಿಸಿದರು. ಶಿಕ್ಷಕಿಯರಾದ ವಿನಯ. ವಿ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅನಿತಾ ಜೆ ರೈ ವಂದಿಸಿದರು.

ವಿಶೇಷ ಆಕರ್ಷಣೆಯಲ್ಲಿ ಮಾದರಿ ವಸ್ತು ತಯಾರಿ ಪ್ರದರ್ಶನ
ಪ್ರಿಕೆಜಿ ಎಲ್.ಕೆ.ಜಿ, ಯುಕೆಜಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿಯವರ ಮಾರ್ಗದರ್ಶನದಂತೆ ದಸರಾ ರಜೆಯಲ್ಲಿ ವಿದ್ಯಾರ್ಥಿಗಳು ವಿಭಿನ್ನ ವಿಶಿಷ್ಟವಾಗಿ ತಯಾರಿಸಿದ ಸುಮಾರು 500ಕ್ಕಿಂತ ಹೆಚ್ಚು ವಿಜ್ಞಾನ ವಸ್ತು ಮಾದರಿ ಮತ್ತು ವಿಷಯವಾರು ವಸ್ತು ಮಾದರಿ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತರಗತಿ ಶಿಕ್ಷಕರು ಆ ವಸ್ತು ಮಾದರಿಯನ್ನು ತರಗತಿವಾರು ಜೋಡಿಸಿಟ್ಟಿರುವ ಪರಿ ಅದ್ಭುತವಾಗಿದ್ದು ಶಿಕ್ಷಕರ ಶ್ರಮ ಎದ್ದು ಕಾಣುವಂತಿತ್ತು. ಒಟ್ಟಿನಲ್ಲಿ ಸಂಸ್ಥೆಯ ಆವರಣ ಹಬ್ಬದ ವಾತಾವರಣದಂತಿತ್ತು.

LEAVE A REPLY

Please enter your comment!
Please enter your name here