’ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಿಸಿ ’

0

ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಆಗ್ರಹ | ಡಿಎಚ್‌ಒಗೆ ಮನವಿ ಮಾಡಲು ನಿರ್ಧಾರ

ರಾಮಕುಂಜ: ಕೊಯಿಲ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ ಒತ್ತಾಯಿಸಿ ನಿಯೋಗದೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಕೊಯಿಲ ಗ್ರಾ.ಪಂ.ನಲ್ಲಿ ನಡೆದ ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ.


ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 40 ಸಾವಿರಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಇದೆ. ಆದರೂ ಈ ಆಸ್ಪತ್ರೆಯಲ್ಲಿ ಶಾಶ್ವತ ವೈದ್ಯರಿಲ್ಲದೇ ಸೂಕ್ತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಈ ವಿಚಾರವನ್ನು ಆರೋಗ್ಯಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಇಲ್ಲಿಗೆ ಶಾಶ್ವತವಾಗಿ ಖಾಯಂ ವೈದ್ಯಾಧಿಕಾರಿಯ ನೇಮಕ ಮಾಡಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು. ಈ ಸಂಬಂಧ ಗ್ರಾಮಸ್ಥರ ನಿಯೋಗದೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಭೇಟಿ ಮಾಡಿ ಮನವಿ ಸಲ್ಲಿಸುವುದು. ಇಸಿಜಿ ವ್ಯವಸ್ಥೆ ಇದ್ದರೂ ನಿರ್ವಹಣೆಗಾರರಿಲ್ಲ, ಇವರನ್ನು ಕೂಡಲೇ ನೇಮಿಸುವುದು. ದಾದಿಯರು ಮತ್ತು ಆಶಾ ಕಾರ್ಯಕರ್ತೆಯನ್ನು ನೇಮಿಸುವುದು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನನಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.


ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಸುಭಾಶ್, ಉಪಾಧ್ಯಕ್ಷ ಯತೀಶ್‌ಕುಮಾರ್, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ, ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಗ್ರಾ.ಪಂ.ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಕೊಯಿಲ ಎಂಡೋಸಲ್ಪಾನ್ ಕೇಂದ್ರದ ಅಧ್ಯಕ್ಷ ಫೀರ್ ಮಹಮ್ಮದ್, ದೇವಿ ಪ್ರಸಾದ್ ಕೊಯಿಲ, ಯಧುಶ್ರೀ ಆನೆಗುಂಡಿ, ಪ್ರಕಾಶ್ ಕೆ.ಆರ್, ಲಕ್ಷ್ಮೀನಾರಾಯಣ ರಾವ್ ಆತೂರು, ನ್ಯಾಯವಾದಿ ಮಹಮ್ಮದ್ ಕಬೀರ್, ಅಝೀಝ್ ಬಿ.ಕೆ, ಪ್ರಕಾಶ್ ಕೆ.ಆರ್, ಸೇರಿದಂತೆ ಹಲವರು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜುನೈದ್ ಕೆಮ್ಮಾರ, ಅಬ್ದುಲ್ಲಾ ಕುಂಞಿ ಅಲಂಕಾರು, ಎಸ್‌ಡಿಎಂಸಿ ಜಿಲ್ಲಾ ಕಾರ್ಯದರ್ಶಿ ಸೆಲಿಕತ್, ಪದ್ಮನಾಭ ಶೆಟ್ಟಿ ಬಡಿಲ, ಮೊಹನದಾಸ್ ಶೆಟ್ಟಿ ಬಡಿಲ, ಬಶೀರ್ ಹಲ್ಯಾರ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಜುನೈದ್ ಕೆಮ್ಮಾರ ನಿರೂಪಿಸಿದರು, ಪ್ರಕಾಶ್ ಕೆ.ಆರ್ ವಂದಿಸಿದರು.

LEAVE A REPLY

Please enter your comment!
Please enter your name here