ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಪ್ರಾಯೋಜಿತ ಸಂಸ್ಥೆಯಾಗಿರುವ ರೋಟರಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ ಇದರ ಆಶ್ರಯದಲ್ಲಿ ಅ.29ರಂದು ಗುಡ್ಡಗಾಡು ಓಟದ ಸ್ಪರ್ಧೆಯು ಜರಗಿತು.
ಈ ಓಟದ ಸ್ಪರ್ಧೆಯು ದೇವಸ್ಯದಿಂದ ಪ್ರಾರಂಭ ಗೊಂಡು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ಇಲ್ಲಿ ಮುಕ್ತಾಯಗೊಂಡಿತು. ಈ ಸ್ವರ್ಧೆಗೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಚಾಲನೆಯನ್ನು ನೀಡುವುದರ ಮೂಲಕ ಈ ಸ್ಪರ್ಧೆಯು ಆರಂಭಗೊಂಡಿತು. ಈ ಸಂದರ್ಭದಲ್ಲಿ ಪುತ್ತೂರು ಆರಕ್ಷಕ ಠಾಣೆಯ ಎಸ್ಐ ಆಂಜನೇಯ ರೆಡ್ಡಿ, ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಸುಜಿತ್ ರೈ, ರೋಟರಾಕ್ಟ್ ಕ್ಲಬ್ ಪುತ್ತೂರು ಸ್ವರ್ಣದ ಸಭಾಪತಿ ರಾಜಗೋಪಾಲ್, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ರಾಹುಲ್ ಆಚಾರ್ಯ, ಯುವ ಜನ ಸೇವಾ ನಿರ್ದೇಶಕ ರೋ. ಪರಮೇಶ್ವರ ಗೌಡ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ಕುಂಞ ಹಾಗೂ ರೋಟರಾಕ್ಟ್ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷೆ ಹರ್ಷಿತಾ, ಕಾರ್ಯದರ್ಶಿ ಅಭಿಚೈತ್ರ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರು ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು. ಶಶಿಧರ್ ಕೆ.ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯನ್ನು ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ನಡೆಸಲಾಗಿದ್ದು, ಮಹಿಳೆಯರ ವಿಭಾಗದಲ್ಲಿ ಚೈತ್ರಾ (ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಪುತ್ತೂರು(ಪ್ರ) , ದೀಪಿಕಾ (ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಪುತ್ತೂರು(ದ್ವಿ), ಶಿಲ್ಪಾ (ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಪುತ್ತೂರು(ತೃ) ಹಾಗೂ ಪುರುಷರ ವಿಭಾಗದಲ್ಲಿ ಅರ್ನಾವ್ ಅನಂತ್ ಅರಿಗ (ಸುದಾನ ಶಾಲೆ ಮಂಜಲ್ಪಡ್ಪು(ಪ್ರ), ಶ್ರೀನಿಧಿ ಮಂಜೋರ್ ವೆಂಕಟರಾಮಯ್ಯ ಅಥ್ಲೆಟಿಕ್ಸ್ ಪುತ್ತೂರು(ದ್ವಿ), ಪ್ರದೀಪ್ ಸಿಕ್ವೇರಾ ಚಿಕ್ಕಪುತ್ತೂರು (ತೃ) ಸ್ಥಾನ ಪಡೆದರು. ಪ್ರಥಮ ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಟ್ರೋಫಿ ಮತ್ತು ನಗದು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಲಾಯಿತು.