ಸಬಳೂರು ಶಾಲೆ ವಿಮಾ ಶಾಲೆ-ಚೆಕ್ ಹಸ್ತಾಂತರ

0

ರಾಮಕುಂಜ: ಕೊಯಿಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯನ್ನು ಭಾರತೀಯ ಜೀವ ವಿಮಾ ನಿಗಮದ ಪುತ್ತೂರು ಶಾಖೆಯು ” ವಿಮಾ ಶಾಲೆ ” ಎಂದು ಘೋಷಿಸಿದೆ.


ನಿಗಮದ ಮುಖ್ಯ ಶಾಖಾಧಿಕಾರಿ ಬಾಲಕೃಷ್ಣ ಡಿ ಯವರು ಶಾಲೆಗೆ ಹತ್ತು ಸಾವಿರ ರೂಪಾಯಿಗಳ ಚೆಕ್ ಅನ್ನು ಶಾಲೆಯ ಮುಖ್ಯ ಗುರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿಮೆ ಮಾಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲೆಯ ವತಿಯಿಂದ ಎಲ್‌ಐಸಿ ಅಧಿಕಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here