ಕಾಂಚನ ಪ್ರೌಢಶಾಲೆಯಲ್ಲಿ ಗಮಕ ವಾಚನ ಕಾರ್ಯಕ್ರಮ

0

ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೊಳಪಟ್ಟ ಕಾಂಚನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಗಮಕ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಮಧೂರು ಮೋಹನ್ ಕಲ್ಲುರಾಯರವರು ಗಮಕವಾಚನಕಾರರಾಗಿ ಹಾಗೂ ಗಮಕ ವ್ಯಾಖ್ಯಾನಕಾರರಾಗಿ ಬದನಾಜೆ ಪ್ರೌಢಶಾಲೆಯ ವಿಜ್ಞಾನ ಅಧ್ಯಾಪಕರಾಗಿರುವ ರಾಮಕೃಷ್ಣ ಬಳಂಜ ಆಗಮಿಸಿದ್ದರು. 10ನೇ ತರಗತಿಯ ಹಳೆಗನ್ನಡ ಕಾವ್ಯವಾದ ಕೌರವೇಂದ್ರನ ಕೊಂದೆ ನೀನು ಪದ್ಯವನ್ನು ವಾಚನ ಮಾಡಿ ಅರ್ಥಗಾರಿಕೆಯನ್ನು ತಿಳಿಸಿದರು. ಅನಂತರ ಮಾತನಾಡಿದ ಮಧೂರು ಮೋಹನ ಕಲ್ಲುರಾಯರವರು ಗಮಕ ಎಂಬುದು ಅತಿ ಪ್ರಾಚೀನ ಕಲೆ. ಕವಿ ರಚಿತ ಕಾವ್ಯಗಳು ಸಾಹಿತ್ಯದ ಅರ್ಥ ಕೆಡದಂತೆ ಪದ ವಿಂಗಡಣೆ ಮಾಡಿ ರಾಗ-ಭಾವ, ಪದ -ಭಾವ ಸಮನ್ವಯಗೊಳಿಸಿ ಸಂಗೀತದ ವಿವಿಧ ರಾಗಗಳನ್ನು ಅಳವಡಿಸಿ ಹಾಡುವ ಕ್ರಮವೇ ಗಮಕ ಎಂದು ವಿದ್ಯಾರ್ಥಿಗಳಿಗೆ ಅರ್ಥೈಸಿದರು. ಶಾಲಾ ಮುಖ್ಯಗುರು ರಮೇಶ್ ಮಯ್ಯರವರು ಗಮಕ ವಾಚನಗಳಿಂದ ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಯುತ್ತದೆ. ಗಮಕ ವಾಚನ ಚರಿತ್ರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಗಣಿತ ಶಿಕ್ಷಕಿಯಾದ ತ್ರಿವೇಣಿಯವರು ಅತಿಥಿಗಳನ್ನು ಪರಿಚಯಿಸಿದರು. ವಿಜ್ಞಾನ ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು. ಕನ್ನಡ ಶಿಕ್ಷಕಿ ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here