ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

0

ಪುತ್ತೂರು: ಕನ್ನಡ ಭಾಷೆ, ನಾಡು-ನುಡಿ, ನೆಲದ ಸೊಗಡಿನ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ, ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯೆ ಶಂಕರಿ ಶರ್ಮ ಅವರು ಸ್ವರಚಿತ ಕವನನ್ನು ವಾಚಿಸುವುದರ ಜೊತೆಗೆ ಕನ್ನಡ ಭಾಷಾ ಕಲಿಕೆಯ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿ ಭೌತಶಾಸ್ತ್ರ ಉಪನ್ಯಾಸಕಿ ಕು.ಅಕ್ಷಯ ಗೋಖಲೆ ಇವರು, ಭಾಷೆಯು ಭಾವನೆಗಳ ತಾಯಿ ಪರಸ್ಪರ ಬಾಂಧವ್ಯವನ್ನು ಉಳಿಸಿ ಬೆಳೆಸುವ ಶ್ರೀಮಂತ ಭಾಷೆ ಕನ್ನಡವಾಗಿದೆ. ಮಕ್ಕಳು ಸಾಹಿತ್ಯದೆಡೆಗೆ ಒಲವು ತೋರಿಸುವುದರ ಮೂಲಕ ಕನ್ನಡ ಭಾಷೆಯನ್ನು ಬೆಳೆಸಲು ಪ್ರಯತ್ನ ಪಡಬೇಕು” ಎಂದು ಹೇಳಿ ಕನ್ನಡ ನಾಡಿನ ಹಲವು ಸಾಧಕರ ಕಥೆಗಳ ಮೂಲಕ ಸ್ಪೂರ್ತಿಯ ನುಡಿಗಳನ್ನಾಡಿದರು.

ಶಾಲಾ ಪ್ರಾಂಶುಪಾಲೆ ಸಿಂಧೂ ವಿ. ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ಹೇಮಾವತಿ ಎಮ್. ಎಸ್ ಅಭ್ಯಾಗತರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಯೋತಿ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪೂರ್ಣಿಮಾರವರು ಧನ್ಯವಾದ ಸಮರ್ಪಣೆಗೈದರು. ಬಳಿಕ, ಪೋಷಕರು ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.

LEAVE A REPLY

Please enter your comment!
Please enter your name here