ಸುದಾನ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಪುತ್ತೂರು: ಯುವಜನತೆಯು ಕನ್ನಡದ ಶ್ರೀಮಂತಿಕೆಯನ್ನು ಅರ್ಥ ಮಾಡಿಕೊಂಡು ಉಳಿಸಿ ಬೆಳೆಸಬೇಕು. ನಾವು ಕನ್ನಡಿಗರು ಎಂಬ ಭಾವವನ್ನು ಬೆಳೆಸಿಕೊಂಡರೆ ನಾಡು ನುಡಿಯ ರಕ್ಷಣೆಗೆ ಸನ್ನದ್ಧರಾಗಲು ಸಾಧ್ಯ ಎಂದು ಮಕ್ಕಳ ಸಾಹಿತಿ ಉಲ್ಲಾಸ ಕೃಷ್ಣ  ಪೈಯವರು ಅಭಿಪ್ರಾಯಪಟ್ಟರು. ಇವರು ಸುದಾನ ವಸತಿಯುತ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ಮಾಡಿ ಮಾತನಾಡಿದರು.

ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.ಇದೇ ಸಂದರ್ಭದಲ್ಲಿ ಇಲಾಖೆಯಿಂದ ನಿರ್ದೇಶಿತವಾದ ಐದು ಕನ್ನಡ ಹಾಡುಗಳನ್ನು ಹಾಡಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಎಲ್ಲಾ ಭಾಷೆಗಳನ್ನು ಗೌರವಿಸಬೇಕು ತಾಯಿನುಡಿ ಕನ್ನಡವನ್ನು ನಮ್ಮದೆಂಬ ಭಾವದಿಂದ ಪ್ರೀತಿಸಬೇಕು, ಅನ್ಯ ಭಾಷೆಗಳನ್ನು ಕಲಿಯುವುದರ ಜೊತೆ ಜೊತೆಗೆ ಕನ್ನಡ ಭಾಷೆಯನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದರು.

ಶಾಲೆಯ ಉಪಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್ ಸಂಯೋಜಕರಾದ ಪ್ರತಿಮಾ, ಗಾಯತ್ರಿ, ಅಮೃತವಾಣಿ ಮತ್ತು ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಚೇತನ ಪಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ವಿದ್ಯಾರ್ಥಿಗಳಾದ ಪ್ರೀತಮ್ ಸ್ವಾಗತಿಸಿ, ಯಶಸ್ವಿ ಮತ್ತು ಈಶಾನ್ವಿ ಕಾರ್ಯಕ್ರಮವನ್ನು ನಿರೂಪಿಸಿದರು,ಸಂಜಯ್ ವಂದಿಸಿದರು. ಸಭಾ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಚೇತನ ಪಿ.ಕೆ, ವಿನುತಾ, ಪ್ರತಿಭಾ ರೈ ಹಾಗೂ ಅನಿತಾ ಸಹಕರಿಸಿದರು.                                                                                                                                                                                                                             

LEAVE A REPLY

Please enter your comment!
Please enter your name here