ರಾಜ್ಯಪಾಲರಿಗೆ ಕಂಬಳದ ಆಮಂತ್ರಣ: ಕಂಬಳಕ್ಕೆ ಆಹ್ವಾನ

0

ಪುತ್ತೂರು: ನ.24,25,26ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ರಾಜ್ಯದ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೊಟ್ ರವರಿಗೆ ಕಂಬಳ ಸಮಿತಿ ಅಧ್ಯಕ್ಷರೂ ,ಪುತ್ತೂರು ಶಾಸಕರೂ ಆಗಿರುವ ಅಶೋಕ್ ರೈ ಅವರು ಆಮಂತ್ರಣ ಪತ್ರ ನೀಡಿ ಕಂಬಳಕ್ಕೆ ಆಹ್ವಾನ ಮಾಡಿದರು.‌ ರಾಜಭವನದಲ್ಲಿ ಇಂದು ರಾಜ್ಯಪಾಲರನ್ನು ಭೇಟಿಯಾದ ಶಾಸಕರ ನೇತೃತ್ವದ ನಿಯೋಗ ಕಂಬಳದ ಬಗ್ಗೆ ಪೂರ್ಣ ವಿವರಣೆ ನೀಡಿದರು. ನಿಯೋಗದಲ್ಲಿ ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಸೇರಿದಂತೆ ತುಳು ಕೂಟ ಹಾಗೂ ಕಂಬಳ ಸಮಿತಿ‌ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here