ಪುತ್ತೂರು:ಬಲ್ನಾಡು ಗ್ರಾಮ ಪಂಚಾಯತ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಕನ್ನಡದ ಗಾಯನ ಗೀತೆಗಳನ್ನು ಸಾಮೂಹಿಕವಾಗಿ ಹಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್‌ನಲ್ಲಿ ಕಳೆದ ಸುಮಾರು 20 ವರ್ಷಗಳಿಂದ ನೀರು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಕ್ಕಪ್ಪ ಗೌಡ ಕಲ್ಲಾಜೆ ಹಾಗೂ ಜಗನ್ನಾಥ ಸಾರ್ಯರವರನ್ನು ಸನ್ಮಾನಿಸಲಾಯಿತು. ಕುಕ್ಕಪ್ಪ ಗೌಡರವರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾಕರ ಪಂಜಳರವರು ತಮ್ಮ ಮೂರು ತಿಂಗಳ ವೇತನವನ್ನು ಕುಕ್ಕಪ್ಪ ಗೌಡರವರ ಜೀವನ ನಿರ್ವಹಣೆಗೆ ದೇಣಿಗೆಯಾಗಿ ನೀಡಿದರು.
ಅಧ್ಯಕ್ಷೆ ಪರಮೇಶ್ವರಿ ಭಟ್, ಉಪಾಧ್ಯಕ್ಷ ರವಿಚಂದ್ರ, ಪಿಡಿಓ ದೇವಪ್ಪ ಪಿ.ಆರ್, ಕಾರ್ಯದರ್ಶಿ ಲಕ್ಷ್ಮೀ, ಸದಸ್ಯರು, ಸಿಬಂದಿಗಳು, ಘನತ್ಯಾಜ್ಯ ಘಟಕದ ಸಿಬಂದಿಗಳು, ಸಂಜೀವಿನಿ ಒಕ್ಕೂಟದ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ಸಹಾಯಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.