ದ.ಕ.ಜಿಲ್ಲಾ ಮಾಸ್ಟರ‍್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ಸತೀಶ್ ರೈ ನಡುಬೈಲು ಆಯ್ಕೆ

0

ಪುತ್ತೂರು: ದ.ಕ.ಜಿಲ್ಲಾ ಮಾಸ್ಟರ‍್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ಸತೀಶ್ ರೈ ನಡುಬೈಲುರವರು ಆಯ್ಕೆಯಾಗಿದ್ದಾರೆ. ನ.1 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ಅಸೋಸಿಯೇಶನ್‌ನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಸತೀಶ್ ರೈಯವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಕ್ರೀಡಾಪಟುವಾಗಿದ್ದರು. ಇವರ ತರಬೇತಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ರೂಪಿಸಿರುತ್ತಾರೆ. ಅಮೆಚೂರ್ ಕಬಡ್ಡಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಯ ಹಿರಿಯರ ಕ್ರೀಡಾ ಕೂಟವನ್ನು ಸಂಘಟಿಸಿ ಎರಡು ಜಿಲ್ಲೆಗಳ ಕ್ರೀಡಾಕೂಟ ಪುತ್ತೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸತೀಶ್ ರೈಯವರಿಗೆ ರೋಟರಿ ಸಂಸ್ಥೆಯು ಕ್ರೀಡಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಸತೀಶ್ ರೈಯವರು ಪುತ್ತೂರು ಬಂಟಸಿರಿ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಮುಖ್ಯ ಕಾರ‍್ಯನಿರ್ವಹಣಾಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here