ಬನ್ನೂರು: ರೈ ಚಾರಿಟೇಬಲ್‌ ಟ್ರಸ್ಟ್ ಫಲಾನುಭವಿಗಳ ಸಭೆ

0

ಬಡವರ ಸೇವೆಗೆಂದೇ ಟ್ರಸ್ಟನ್ನು ಆರಂಭಿಸಲಾಗಿದೆ: ನಿಹಾಲ್ ಶೆಟ್ಟಿ
ಪುತ್ತೂರು: ಕಳೆದ ಹತ್ತು ವರ್ಷಗಳ ಹಿಂದೆ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟನ್ನು ಸ್ಥಾಪನೆ ಮಾಡಿದ್ದೇ ಬಡವರ ಸೇವೆಗಾಗಿ, ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಅಶೋಕ್ ರೈಯವರು ಶಾಸಕರಾಗುವ ಮೊದಲೇ ಟ್ರಸ್ಟ್‌ನಿಂದ ಸಮಾಜ ಸೇವೆ ನಡೆಯುತ್ತಲೇ ಇದೆ ಎಂದು ಟ್ರಸ್ಟ್‌ನ ಪ್ರಮುಖರಾದ ನಿಹಾಲ್ ಶೆಟ್ಟಿ ಹೇಳಿದರು.


ಅವರು ಬನ್ನೂರು ನವೋದಯ ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ರೈ ಚಾರಿಟೇಬಲ್ ಟ್ರಸ್ಟ್ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ವಿವಿಧ ಸೇವೆಗಳನ್ನು ಟ್ರಸ್ಟ್ ನೀಡುತ್ತಾ ಬಂದಿದೆ. ಬಡ ಮಹಿಳೆಯರಿಗೆ ಹೊಲಿಗೆ ತರಬೇತಿ , ಚಾಲನಾ ತರಬೇತಿ, ಮೆಡಿಕಲ್ ಕ್ಯಾಂಪ್, ಬಡವರಿಗೆ ಆರ್ಥಿಕ ನೆರವು ಸೇರಿದಂತೆ ಅನೇಕ ಬಡವರ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಟ್ರಸ್ಟ್ ಮೂಲಕ ತರಬೇತಿ ಪಡೆದ ಅನೇಕ ಮಂದಿ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವಾಭಿಮಾನಿಗಳಾಗಿದ್ದು ಅತ್ಯಂತ ಸಂತೋಷದ ವಿಚಾರವಾಗಿದೆ. ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಟ್ರಸ್ಟ್‌ನಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಬಾರಿಯ ದೀಪಾವಳಿಯಲ್ಲೂ ಬಡವರಿಗೆ ವಸ್ತ್ರ ವಿತರಣೆ ಹಾಗೂ ಸಹಭೋಜನ ಕಾರ್ಯಕ್ರಮ ನಡೆಯಲಿದ್ದು ಎಲ್ಲಾ ಗ್ರಾಮಸ್ಥರು ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಬನ್ನೂರು ನವೋದಯ ಯುವಕಮಂಡಲದ ಅಧ್ಯಕ್ಷ ರಾಧಾಕೃಷ್ಣ ರೈ, ಕಾರ್ಯದರ್ಶಿ ರೋಹಿತ್ ರೈ, ಚಂದ್ರಾಕ್ಷ, ದಿನೇಶ್ ಸಾಲಿಯಾನ್, ಸಾಹಿರಾ ಬಾನು ಸೇರಿದಂತೆ ಟ್ರಸ್ಟ್‌ನ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here