ನ.5ರಂದು ನೃತ್ಯೋಪಾಸನಾ ಕಲಾಕೇಂದ್ರದ ‘ವರ್ಷ ಸಂಭ್ರಮ-19’-ವಿದ್ವಾನ್‌ ಗೋಪಾಲಕೃಷ್ಣರಿಗೆ ನೃತ್ಯೋಪಾಸನಾ ಗೌರವ

0

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ ಇದರ ‘ವರ್ಷ ಸಂಭ್ರಮ-19’ ಕಾರ್ಯಕ್ರಮ ನ. 5 ರಂದು ಸಂಜೆ 4.30ರಿಂದ ಇಲ್ಲಿನ ಬೈಪಾಸ್‌ ಸಮೀಪದ
ಜೈನಭವನದಲ್ಲಿ ನಡೆಯಲಿದೆ. ಮಂಗಳೂರು ಕೊಲ್ಯದ ನಾಟ್ಯನಿಕೇತನದ ನೃತ್ಯಗುರು, ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್‌ ಉಳ್ಳಾಲ ಮೋಹನ್‌ ಕುಮಾರ್‌ ದೀಪ ಬೆಳಗಿಸಿ
ವರ್ಷ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ.


ಸಂಜೆ 6 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನೆಹರೂ ನಗರದ ವಿವೇಕಾನಂದ ಕಾಲೇಜಿನ ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್‌ ಮುಳಿಯ ಮುಖ್ಯ ಅತಿಥಿಯಾಗಿಭಾಗವಹಿಸುವರು. ಸಮಾಜ ಸೇವಕ ಅರುಣ್‌ ಕುಮಾರ್‌ ಪುತ್ತಿಲ ಅಧ್ಯಕ್ಷತೆ ವಹಿಸುವರು.


ನೃತ್ಯೋಪಾಸನಾ ಗೌರವ:
ಶ್ರೀಕೃಷ್ಣ ಕಲಾಕೇಂದ್ರ ವೀರಮಂಗಲ ಇದರ ನೃತ್ಯಗುರು ವಿದ್ವಾನ್‌ ಗೋಪಾಲಕೃಷ್ಣ ಕೆ. ನೃತ್ಯೋಪಾಸನಾ ಗೌರವ ನೀಡಲಾಗುವುದು.ಸಂಗೀತ, ನೃತ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಗೆ ಇವರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ನೃತ್ಯ ಪೋಷಣೆ ಕಾರ್ಯಕ್ರಮದಡಿ ಉಚಿತ ನೃತ್ಯ ಶಿಕ್ಷಣಕ್ಕೆ ಬಡ ವಿದ್ಯಾರ್ಥಿಗಳ ದತ್ತುಸ್ವೀಕಾರವೂ ನೆರವೇರಲಿದೆ. ಇದೇ ವೇಳೆ ನೃತ್ಯಭರತನಾಟ್ಯ ಜೂನಿಯರ್‌, ಸೀನಿಯರ್‌ ಹಾಗೂ ವಿದ್ವತ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಲಿದೆ.


ನೃತ್ಯೋಪಾಸನಾ ಕಾರ್ಯಕ್ರಮದಲ್ಲಿ ಪುತ್ತೂರು ಹಾಗೂ ಉಪ್ಪಿನಂಗಡಿ ಶಾಖೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಲಿದ್ದಾರೆ. ಹಿಮ್ಮೇಳದಲ್ಲಿ ನಟುವಾಂಗ ವಿದುಷಿ
ಶಾಲಿನಿ ಆತ್ಮಭೂಷಣ್‌, ಹಾಡುಗಾರಿಕೆಯಲ್ಲಿ ವಸಂತ ಕುಮಾರ್‌ ಗೋಸಾಡ ಹಾಗೂ ವಿದ್ವಾನ್‌ ಕೃಷ್ಣಾಚಾರ್‌ ಪಾಣೆಮಂಗಳೂರು, ಮೃದಂಗದಲ್ಲಿ ವಿದ್ವಾನ್‌ ಗೀತೇಶ್‌ ನೀಲೇಶ್ವರ,
ಕೊಳಲಿನಲ್ಲಿ ವಿದ್ವಾನ್‌ ರಾಜ್‌ಗೋಪಾಲ್‌ ಕಾಞಂಗಾಡ್‌ ಸಾಥ್‌ ನೀಡಲಿದ್ದಾರೆ ಎಂದು ನೃತ್ಯಕೇಂದ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here