ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಉಪ್ಪಿನಂಗಡಿ: ಇಲ್ಲಿನ ಅರಫಾ ವಿದ್ಯಾಕೇಂದ್ರದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆರಿಸಲಾಯಿತು.
ಶಾಲೆಯ ಅಧ್ಯಕ್ಷ ಕೆ.ಪಿ.ಎ ಸಿದ್ದೀಕ್‌ರವರು ಕನ್ನಡಾಂಬೆಗೆ ಪುಷ್ಪಾರ್ಚನೆಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕಿ ಕವಿತ ನವೀನ್ ಕುಲಾಲ್‌ರವರು ವಹಿಸಿದ್ದರು.,ವಿದ್ಯಾರ್ಥಿನಿ ಆಯಿಷಾತುಲ್ ನಿಶಾನ, ಶಿಕ್ಷಕ ಲೋಕೇಶ್‌,ಉಪ ಮುಖ್ಯಶಿಕ್ಷಕಿ ಪವಿತ್ರಾ,ಶಿಕ್ಷಕಿ ಸೌಮ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಮತ್ತು ಶಿಕ್ಷಕರಿಂದ ಸಮೂಹ ಗೀತೆಗಾಯನ ನಡೆಯಿತು. ಶಿಕ್ಷಕಿ ಸಿಮಿ ಪ್ರಾರ್ಥಿಸಿ,ವಿದ್ಯಾರ್ಥಿನಿ ಅಮಲ್ ಸ್ವಾಗತಿಸಿ, ಶಿಕ್ಷಕಿ ಸಾಬೀರ ಮತ್ತು ವಿದ್ಯಾರ್ಥಿನಿ ಸಾರಾ ಮೈಮುನ ವಂದಿಸಿದರು. ಶಿಕ್ಷಕ ಸಚಿನ್ ಮತ್ತು ವಿದ್ಯಾರ್ಥಿನಿ ಅಮ್ರ ಯು.ಕೆ.ನಿರೂಪಿಸಿದರು.

LEAVE A REPLY

Please enter your comment!
Please enter your name here