ಕುರಿಯ: ಮನೆಗೆ ಮರ ಬಿದ್ದು ಹಾನಿ

0

ಕುರಿಯ: ನ.3ರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕುರಿಯ ಗ್ರಾಮದ ಮಲಾರ್‌ ಎಂಬಲ್ಲಿ ಮರವೊಂದು ಮನೆ ಮೇಲೆ ಬಿದ್ದು ಹಾನಿಯಾದ ಘಟನೆ ನಡೆದಿದೆ. ಫಿಲೋಮಿನಾ ಡಿಸೋಜಾ ಎಂಬವರ ಮನೆಗೆ ಮರ ಬಿದ್ದಿದ್ದು ಅಪಾರ ನಷ್ಟ ಸಂಭವಿಸಿದೆ.ತಮ್ಮದೇ ಜಾಗದಲ್ಲಿದ್ದ ಮರವು ಮನೆಯ ಒಂದು ಭಾಗಕ್ಕೆ ಬಿದ್ದ ಸಂದರ್ಭದಲ್ಲಿ ಮನೆ ಮಂದಿ ಮನೆಯೊಳಗಿದ್ದರು ಯಾವುದೇ ರೀತಿಯ ಅಪಾಯ ಆಗಿರುವುದಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ನಂತರ‌ ಆರ್ಯಾಪು ಗ್ರಾ.ಪಂ ಸದಸ್ಯ ಯಾಕುಬ್‌ ಕುರಿಯ,ಮಾಜಿ ಗ್ರಾ.ಪಂ ಸದಸ್ಯ ಇಸ್ಮಾಯಿಲ್‌ ಮಲಾರ್,ಸಾಮಾಜಿಕ ಕಾರ್ಯಕರ್ತ ಪ್ರೀತಂ ಡಿಸೋಜಾ, ವಿ ಎಂ ಡಿಸೋಜಾ, ಗ್ರಾಮ ಸಹಾಯಕ ನವೀನ್‌ ಕುಮಾರ್‌ ಡಿ ಎಮ್‌ ಸ್ಥಳಕ್ಕೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here