ನಾಣಿಲ ಶಾಲೆಗೆ ಸ್ಪೀಕರ್ ಮತ್ತು ಮೈಕ್ರೋಫೋನ್ ಕೊಡುಗೆ

0

ಕಾಣಿಯೂರು: ನಾಣಿಲ ಸ. ಹಿ. ಪ್ರಾ. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಮಂಗಳರವರು ನಾಣಿಲ ಶಾಲೆಗೆ ಬ್ಲೂಟೂತ್ ಸ್ಪೀಕರ್ ಮತ್ತು ಮೈಕ್ರೋಫೋನ್ ಕೊಡುಗೆಯಾಗಿ ನೀಡಿದರು. ವರ್ಗಾವಣೆಗೊಂಡ ಶಿಕ್ಷಕಿ ಲೀನಾ ಲಸ್ರಾದೊ ಕಿರು ದೇಣಿಗೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ದಲಾರಿ, ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಂಗಮ್ಮ ಗುಜ್ಜರ್ಮೆ, ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದ, ಶಾಲಾ ಮುಖ್ಯಗುರು ಪದ್ಮಯ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಕುಸುಮಾವತಿ ಕಳ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಪುರಂದರ ಅಂಬುಲ, ದಿನೇಶ ಕುಕ್ಕುನಡ್ಕ, ವಸಂತ ಮುಂಗಳಿಮನೆ, ದಾಮೋದರ ಕಂಡಿಗ, ಬಾಲಕೃಷ್ಣ ಕಂಡಿಗ, ಆನಂದ ಉದಲಡ್ಡ, ಸರೋಜಿನಿ ಅರುವ, ಬಾಲಕಿ ಕಳ, ಜಯಂತಿ ಮುದ್ವ, ವಸಂತಿ ಅಭಿಕಾರ, ಶಕುಂತಲಾ, ಪುಷ್ಪಲತಾ, ಲೋಲಾಕ್ಷಿ, ಲತಾ ಹಾಗೂ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here