ಪುತ್ತೂರು: ಪುತ್ತೂರಿನಲ್ಲಿನಡೆದ ಕೊಲೆ ಪ್ರಕರಣಕ್ಕೆ ಕಾನೂನು ವೈಫಲ್ಯ, ಸರಕಾರದ ವೈಫಲ್ಯವಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ ಮಾಡಿದ್ದು ಈ ಆರೋಪಕ್ಕೆ ಒಳಮೊಗ್ರು ಕಾಂಗ್ರೆಸ್ ವಲಯಾಧ್ಯಕ್ಷರಾದ ಅಶೋಕ್ ಪೂಜಾರಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಸರಕಾರವಿರುವಾಗಲೇ ಪ್ರವೀಣ್ ನೆಟ್ಟಾರು ಕೊಲೆಯಾಗಿದ್ದು ,ಸಂಸದರ ಕಾರು ಅಲುಗಾಡಿದ್ದು ಎಂಬುದನ್ನು ಶಾಸಕರು ನೆನಪಿಸಿಕೊಳ್ಳಬೇಕು. ಏನೇ ಘಟನೆ ನಡೆದರೂ ಅದಕ್ಕೆ ರಾಜಕೀಯ ಬೆರೆಸುವುದು ಬಿಜೆಪಿಯವರ ಹವ್ಯಾಸವಾಗಿದೆ. ಕಳೆದ 5 ವರ್ಷಗಳ ಹಿಂದೆ ಬಿಜೆಪಿ ಸರಕಾರ ಇರುವಾಗ ರಾಜ್ಯದಲ್ಲಿ ಅರಾಜಕತೆ ಉಂಟಾಗಿತ್ತು. ಅಲ್ಲಲ್ಲಿ ಗಲಭೆಗಳು, ಕೊಲೆ ಪ್ರಕರಣಗಳು ನಡೆಯುತ್ತಲೇ ಇದ್ದವು. ಆಗ ಮಾಜಿ ಶಾಸಕರು ಸರಕಾರವನ್ನು ಪ್ರಶ್ನಿಸುವ ತಾಕತ್ತು ತೋರಿಸಬೇಕಿತ್ತು. ಪುತ್ತೂರಿನಲ್ಲಿನಡೆದ ಕೊಲೆ ಘಟನೆಗೆ ಸರಕಾರದ ವೈಫಲ್ಯ ಎಂದು ಹೇಳುವ ನೈತಿಕತೆ ಮಾಜಿ ಶಾಸಕರಿಗಿಲ್ಲ. ಶಾಸಕರಾಗಿರುವಾಗ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಠಂದೂರು ಮಾಡದೆ ಕೇವಲ ಸೆಲ್ಫಿ ತೆ್ರಯುವುದರಲ್ಲೇ ಬ್ಯುಸಿಯಾಗಿದ್ದರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಾಗಿದೆ. ಅವರು ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಲಿ. ಎಲ್ಲದಕ್ಕೂ ರಾಜಕೀಯ ಬಣ್ಣ ಕೊಡುವುದನ್ನು ನಿಲ್ಲಿಸಲಿ ಎಂದು ಅಶೋಕ್ ಪೂಜಾರಿ ಹೇಳಿದ್ದಾರೆ.