ದೀಪಾವಳಿ ಹಬ್ಬದ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲು

0

ದೀಪಾವಳಿ ಹಬ್ಬ ಇನ್ನೇನು ಹತ್ತಿರ ಬಂತು. ಆದರೆ ಊರಿಗೆ ಬರಲು ಬಸ್ಸು,ರೈಲುಗಳಲ್ಲಿ ಟಿಕೇಟು ಸಿಗುತ್ತಿಲ್ಲ ಎಂಬ ಸಮಸ್ಯೆಯಲ್ಲಿದ್ದೀರಾ? ಚಿಂತಿಸಬೇಡಿ! ಇಲ್ಲಿದೆ ಪ್ರಯಾಣಿಕರಿಗೆ ಪ್ರಯಾಣಿಕರಿಗೆ ಶುಭ ಸುದ್ದಿ.
ರೈಲ್ವೆ ಇಲಾಖೆಯು ದೀಪಾವಳಿ ಹಬ್ಬದ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲು ಓಡಿಸುತ್ತಿದೆ!
ನ.10 ಶುಕ್ರವಾರದಂದು ರೈಲು ಸಂಖ್ಯೆ 07303 ಮೈಸೂರು ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ ಮೈಸೂರಿನಿಂದ ರಾತ್ರಿ 8:30ಕ್ಕೆ ಹೊರಟು ರಾತ್ರಿ 11:25ಕ್ಕೆ ಕ್ರಾ.ಸಂ.ರಾ ಬೆಂಗಳೂರು ತಲುಪಲಿದೆ. ಅಲ್ಲಿಂದ ರಾತ್ರಿ 11:30ಕ್ಕೆ ಹೊರಟು ನ.11 ಶನಿವಾರದಂದು ಬೆಳಗ್ಗೆ 9:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ನ.14 ಬುಧವಾರದಂದು ರೈಲು ಸಂಖ್ಯೆ 07304 ಮಂಗಳೂರು ಜಂಕ್ಷನ್-ಮೈಸೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಜಂಕ್ಷನ್‌ನಿಂದ ಸಂಜೆ 5:15ಕ್ಕಿ ಹೊರಟು ಮರುದಿನ ಬೆಳಗ್ಗೆ 3:45ಕ್ಕೆ ಕ್ರಾ.ಸಂ.ರಾ ಬೆಂಗಳೂರು ತಲುಪಲಿದೆ. ಅಲ್ಲಿಂದ ಬೆಳಗ್ಗೆ 3:50ಕ್ಕಿ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ.
ಈ ರೈಲಿಗೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ,ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಯಶವಂತಪುರ, ಕ್ರಾ.ಸಂ.ರಾ ಬೆಂಗಳೂರು, ಕೆಂಗೇರಿ, ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.
ಈ ರೈಲಿನಲ್ಲಿ ಜನರಲ್, ಸ್ಲೀಪರ್ ಕ್ಲಾಸ್, 3 ಟೈರ್ ಎಸಿ, 2 ಟೈರ್ ಎಸಿ ಹಾಗು ಪ್ರಥಮ ದರ್ಜೆಯ ಕ್ಯಾಬಿಪ್ ಕೋಚುಗಳು ಇರಲಿದೆ. ಬುಕ್ಕಿಂಗ್ ಈಗಾಗಲೇ ತೆರೆದಿದ್ದು, ಊರಿಗೆ ಬರಲು ಆಗುತ್ತಿಲ್ಲ ಎಂಬ ಸಮಸ್ಯೆಗೆ ಸಿಲುಕಿದ್ದರೆ ಈ ಕೂಡಲೇ ಟಿಕೇಟು ಕಾಯ್ದಿರಿಸಿ.

ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರು(Dakshina Kannada District Railway Users) ಫೇಸ್ಬುಕ್ ಪುಟವನ್ನು ಅಥವಾ ಏಕ್ಸ್ ನಲ್ಲಿ ಪುಟವನ್ನು ಸಂದರ್ಶಿಸಿ ಮಾಹಿತಿಯನ್ನು ಪಡೆದು ಕೊಳ್ಳಬಹುದು.


LEAVE A REPLY

Please enter your comment!
Please enter your name here