ನೆಲ್ಯಾಡಿ : ಕಡಬ ತಾಲೂಕು ಜನಜಾಗೃತಿ ವೇದಿಕೆಯ ಸ್ವಾಸ್ಥ್ಯ ಸಂಕಲ್ಪ ಸಪ್ತಾಹದ ಸಮಾರೋಪ

0

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ

ಪುತ್ತೂರು: ದುಶ್ಚಟಗಳ ಸಹವಾಸದಿಂದ ಎದುರಾಗುವ ದುಷ್ಪರಿಣಾಮಗಳ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸುತ್ತಿರುವ  ಜನಜಾಗೃತಿ ವೇದಿಕೆಯ  ಕಾರ್ಯ ಶ್ಲಾಘನೀಯ , ಜನತೆ ಮಾದಕ ವ್ಯಸನಗಳಿಗೆ ದಾಸರಾಗುವುದನ್ನು  ತಪ್ಪಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಂಘಟಕರ ಕಾರ್ಯ ಅಭಿನಂದನಾರ್ಹ ಎಂದು  ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾದರ್ ಥೋಮಸ್ ಬಿಜಿಲಿ ಓ.ಐ.ಸಿ.  ಹೇಳಿದರು.

ಅವರು ನ.8ರಂದು  ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಇವುಗಳ ಆಶ್ರಯದಲ್ಲಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಕಡಬ ಇದರ ಸಹಕಾರದೊಂದಿಗೆ ಜನಜಾಗೃತಿ ವೇದಿಕೆಯ ಸ್ವಾಸ್ಥ್ಯ ಸಂಕಲ್ಪ ಸಪ್ತಾಹದ ಸಮಾರೋಪ, ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಮಾರೋಪ ಭಾಷಣ ಮಾಡಿದ  ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ‌ನ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ದುಶ್ಚಟಗಳ ಸಹವಾಸದಿಂದ ಹಾದಿ ತಪ್ಪಿದರೆ ಅದರ ವಿಷವರ್ತುಲದಿಂದ ಹೊರಬರುವುದು ಕಷ್ಟ. ವಿದ್ಯಾರ್ಥಿಗಳು ಆಕರ್ಷಣೆಗೆ ಒಳಗಾಗದೇ ಶೈಕ್ಷಣಿಕ ವಿಚಾರಗಳತ್ತ ಗಮನಹರಿಸಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಸಮಾಜದಲ್ಲಿ ದುಶ್ಚಟಗಳಿಗೆ ಬಲಿಯಾದ ವ್ಯಸನಿಗಳನ್ನು ಸಮಾಜ ಬೇರೆಯದೇ ರೀತಿಯಲ್ಲಿ ನೋಡುತ್ತಿದೆ.ಮಾದಕ ವ್ಯಸನಿಗಳಿಗೆ ಭವಿಷ್ಯವಿಲ್ಲ.ವ್ಯಸನಕ್ಕೆ ಸಿಲುಕಿದ ಹೆಚ್ಚಿನವರು ಆತ್ಮಹತ್ಯೆ ,ಅಕಾಲಿಕ ಸಾವು ,ಅಪಘಾತಗಳಿಂದ ಜೀವ ಕಳೆದುಕೊಳ್ಳುವುದನ್ನು ನಾವು ನೋಡಿದ್ದೇವೆ ಎಂದರು. ಜನತೆಯನ್ನು  ದುಶ್ಚಟಗಳಿಂದ ದೂರಮಾಡುವ ನಿಟ್ಟಿನಲ್ಲಿ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ  ಜನಜಾಗೃತಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಜನಜಾಗೃತಿ ವೇದಿಕೆಯ ವ್ಯಸನ ಮುಕ್ತ ಕಾರ್ಯಕ್ರಮಗಳಿಂದ ಸಾವಿರಾರು ವ್ಯಸನಿಗಳು ಮದ್ಯಪಾನ ,ಮಾದಕ ವ್ಯಸನ ತ್ಯಜಿಸಿ ಸುಂದರ ಜೀವನ ನಡೆಸುತ್ತಿದ್ದಾರೆ. ಪ್ರಪಂಚದಲ್ಲಿ ಹಾಳಾಗಲು ಸಾವಿರಾರು ದಾರಿಗಳಿವೆ. ಅದರಲ್ಲಿ ಮಾದಕ ದ್ರವ್ಯ, ಮಾದಕ ವ್ಯಸನ ಮೊದಲ ಸ್ಥಾನದಲ್ಲಿವೆ ಎಂದು ಅವರು ಹೇಳಿದರು

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ , ಜನಜಾಗೃತಿ ವೇದಿಕೆಯ ವತಿಯಿಂದ ಸಮಾಜದಲ್ಲಿ ದುಶ್ಚಟಗಳಿಗೆ ಬಲಿಯಾದ ಅದೆಷ್ಟೋ ಜನರಿಗೆ ಹೊಸಜೀವನ ನೀಡಿದೆ.ಯಾವುದೋ ಕಾರಣದಿಂದ ಮದ್ಯವ್ಯಸನ ಹೊಂದಿದ್ದವರೂ ನವಜೀವನ ನಡೆಸುತ್ತಿದ್ದಾರೆ.ಇದರ ಶ್ರೇಯಸ್ಸು ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಸಲ್ಲುತ್ತದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಜನರು ದುಶ್ಚಟಗಳಿಂದ ದೂರವಾಗಿ ಸಮಾಜದ ಆಸ್ತಿಯಾಗಬೇಕು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಮೂಲಕ ಸಮಾಜದಲ್ಲಿ ಪರಿವರ್ತನೆಯ ಕಾರ್ಯ ನಡೆಸಲಾಗುತ್ತಿದೆ ಎಂದರು. ಕಡಬ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ  ಬಾಲಕೃಷ್ಣ ಕೊಯಿಲ ಮಾತನಾಡಿ , ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಅಮೂಲಾಗ್ರ  ಬದಲಾವಣೆಯಾಗಿದೆ.ಆರ್ಥಿಕ ಶಿಸ್ತು ಹಾಗೂ ಆರ್ಥಿಕ ಸಾಕ್ಷರತೆ ಉಂಟಾಗಿದೆ.ಅಲ್ಲದೇ ಜನಜಾಗೃತಿ ವೇದಿಕೆಯ ಮೂಲಕ ನಡೆಯುತ್ತಿರುವ ಮದ್ಯವರ್ಜನ ಶಿಬಿರದಿಂದ ಹಲವರಿಗೆ ಪುನರ್ಜನ್ಮ ಸಿಕ್ಕಿದೆ.ಅದೆಷ್ಟೋ  ಕುಟುಂಬಗಳು ಯೋಜನೆಯಿಂದ ಬೆಳಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ, ವಕೀಲ ಮಹೇಶ್ ಕೆ.ಸವಣೂರು ಮಾತನಾಡಿ ,ಸ್ವಾಸ್ಥ್ಯ ಸಂಕಲ್ಪ ಸಪ್ತಾಹ ಕಾರ್ಯಕ್ರಮ ಯಶಸ್ವಿಯಾಗುವ ನಿಟ್ಟಿನಲ್ಲಿ ಎಲ್ಲರೂ ಉತ್ತಮ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.ಇದರ ಜತೆಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಮೂರು ವಿಭಾಗಗಳ್ಲಲ್ಲಿ  ಆಯೋಜಿಸಲಾಗಿತ್ತು.ಸುಮಾರು 149 ಮಂದಿ ಪ್ರಬಂಧ ಬರೆದಿದ್ದಾರೆ.ಬಹುಮಾನ ವಿಜೇತರ ಆಯ್ಕೆಯಲ್ಲಿ ಪಾರದರ್ಶಕವಾಗಿ ತೀರ್ಪುಗಾರರು ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ. ಕಡಬ ತಾಲೂಕು ಜನ ಜಾಗೃತಿ ವೇದಿಕೆಯು ಹತ್ತು ಹಲವು ಕಾರ್ಯಗಳನ್ನು ನಡೆಸುತ್ತಿದೆ.ಬೆಂಬಲವಾಗಿ ನಿಂತಿರುವ ಯೋಜನೆಯ ಎಲ್ಲಾ ಅಧಿಕಾರಿಗಳಿಗೆ ,ಒಕ್ಕೂಟದ ಪದಾಧಿಕಾರಿಗಳಿಗೆ ,ಜನಜಾಗೃತಿ ವೇದಿಕೆ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಉಪಪ್ರಾಂಶುಪಾಲ ಜೋಸ್ ಎಂ.ಜೆ , ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಕಡಬ ತಾಲೂಕಿನ ಅಧ್ಯಕ್ಷ ಸಂತೋಷ್ ಕೆ. ,ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ,ಗ್ರಾಮಾಭಿವೃದ್ದಿ ಯೋಜನೆಯ  ಪ್ರಗತಿ ಬಂಧು ಸ್ವಸಹಾಯ ಸಂಘಗಳ ನೆಲ್ಯಾಡಿ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ -ಬಹುಮಾನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇದರ ವತಿಯಿಂದ ನಡೆದ ರಾಜ್ಯ ಮಟ್ಟದ (ಪ್ರೌಢ, ಕಾಲೇಜು ಮತ್ತು ಸಾರ್ವಜನಿಕ ವಿಭಾಗ) ಪ್ರಬಂಧ ಸ್ಪರ್ಧೆಯ ಹೈಸ್ಕೂಲ್ ವಿಭಾಗ- ವಿಷಯ “ದುಶ್ಚಟ”—- ಮಕ್ಕಳ ಬೆಳವಣಿಗೆಗೆ ಮಾರಕ ವಿಷಯದಲ್ಲಿ ಪ್ರಥಮ ಬಹುಮಾನ ಪಡೆದ  ದೀಪ್ತಿ ಕೆ ಸಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು, ಪುತ್ತೂರು ತಾಲೂಕು ,ದ್ವಿತೀಯ ಬಹುಮಾನ ಪಡೆದ ಸ್ವಾತಿ – ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ಕಡಬ ತಾಲೂಕು, ಸಮಾಧಾನಕರ ಬಹುಮಾನ ಪಡೆದ   ದೀಕ್ಷ – ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು, ಕಡಬ ತಾಲೂಕು, ದ.ಕ , ಪ್ರಜ್ವಲ್ ಬಿ ಪಿ -ಸರಸ್ವತಿ ವಿದ್ಯಾಮಂದಿರ ಪುರುಷರಕಟ್ಟೆ ನರಿಮೊಗರು, ಪುತ್ತೂರು ತಾಲೂಕು, ಬಿ.ಲಕ್ಷಾ-ಶ್ರೀದುರ್ಗಾಂಬಾ ಪ್ರೌಢ ಶಾಲೆ ಆಲಂಕಾರು, ಕಡಬ ತಾಲೂಕು ಇವರಿಗೆ , ಕಾಲೇಜು ವಿಭಾಗ – ವಿಷಯ “ದುಶ್ಚಟದಿಂದ ಕುಟುಂಬದ ಮೇಲೆ ಆಗುವ ಪರಿಣಾಮ” ವಿಷಯದಲ್ಲಿ ಪ್ರಥಮ  ಬಹುಮಾನ ಪಡೆದ ನದ ಐ ಎ – ಸಂತ ಫಿಲೋಮಿನಾ ಕಾಲೇಜು ಪುತ್ತೂರು ,ದ್ವಿತೀಯ – ಪ್ರಜ್ಞಾ ಎಂ ಆರ್ – ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ,ಕಡಬ ತಾಲೂಕು , ಸಮಾಧಾನಕರ ಬಹುಮಾನ ಪಡೆದ  ಜನನಿ ಕೆ ಎಂ – ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ, ಸುಳ್ಯತಾಲೂಕು, ದ.ಕ , ಭಾಗ್ಯಶ್ರೀ ಕೆ ಡಿ – ಶ್ರೀ ಶಾರದ ಮಹಿಳಾ ಪಿಯು ಕಾಲೇಜು ಸುಳ್ಯ ದ.ಕ , ಸುರಕ್ಷಾ – ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ, ಕಡಬ ತಾಲೂಕು ಅವರಿಗೆ , ಸಾರ್ವಜನಿಕ ವಿಭಾಗ- ಮಾದಕ ಮುಕ್ತ ಸಮಾಜ ವಿಷಯದಲ್ಲಿ  ಪ್ರಥಮ ಬಹುಮಾನ ಪಡೆದ  ಸಂತೋಷ್ ಕುಮಾರ್ ಎಂ – ಮರಕ್ಕಡ, ಕಾಯ್ಮಣ ಗ್ರಾಮ, ಕಡಬ ತಾಲೂಕು , ದ್ವಿತೀಯ  ಬಹುಮಾನ ಪಡೆದ ಗೀತಾ ಎಸ್ ಎಂ – ಮುಂಡಾಜೆ, ಹರಿಹರ ಪಲ್ಲತ್ತಡ್ಕ ಗ್ರಾಮ ಸುಳ್ಯ ತಾಲೂಕು , ಸಮಾಧಾನಕರ ಬಹುಮಾನ ಪಡೆದ  ಸಹನಾ ಕಾಂತಬೈಲು, ಬಾಲಂಬಿ ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ, ಉಮಾ ಪಿ ಆರ್ – ಬೆಟ್ಟಂಪಾಡಿ, ಪುತ್ತೂರು ತಾಲೂಕು, ಕರುಣಾಕರ – ಉರುಂಬತ್ತಿಮಾರ್, ಕಣಿಯೂರು ಗ್ರಾಮ ಬೆಳ್ತಂಗಡಿ ಇವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ಬಹುಮಾನಿತರ ಪರವಾಗಿ  ಸಂತೋಷ್ ಕುಮಾರ್ ಎಂ  ಮರಕ್ಕಡ ಮಾತನಾಡಿದರು.

ಸನ್ಮಾನ

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಬಂದ ಸ್ಪರ್ಧೆಯ ತೀರ್ಪುಗಾರರಾದ ಶಿಕ್ಷಕಿ ಹರಿಣಾಕ್ಷಿ ಸೂತ್ರಬೆಟ್ಟು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರ ನಮ್ಮ ಕೆರೆ ಯೋಜನೆಯಲ್ಲಿ ಕಡಬ ತಾಲೂಕಿನ ಯೋಜನೆಯನ್ನು ಸವಣೂರು ಗ್ರಾ.ಪಂ.ವ್ಯಾಪ್ತಿಯ ಕೊಂಬಕೆರೆಯ ಅಭಿವೃದ್ದಿ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ಹಿಸಿದ್ದ  ಕೊಂಬಕೆರೆ ಅಭಿವೃದ್ದಿ ಸಮಿತಿಯ ಅಧ್ಯಕ್ಷ ,ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಅವರನ್ನು  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ  ಯೋಜನೆ ಮತ್ತು ಜನಜಾಗೃತಿ ವೇದಿಕೆಯ  ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಶಿಕ್ಷಕಿ ಹರಿಣಾಕ್ಷಿ  ಸೂತ್ರಬೆಟ್ಟು ಮಾತನಾಡಿ ,ಕೃತಜ಼್ಞತೆ ಸಲ್ಲಿಸಿದರು.

ಗೌರವಾರ್ಪಣೆ

ಕಾರ್ಯಕ್ರಮದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾದರ್ ಥೋಮಸ್ ಬಿಜಿಲಿ ಓಐಸಿ  ,ಜನಜಾಗೃತಿ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ  ಪದ್ಮನಾಭ ಶೆಟ್ಟಿ , ಕಡಬ ತಾಲೂಕು ಅಧ್ಯಕ್ಷ ಮಹೇಶ್‌ಕೆ.ಸವಣೂರು , ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಾಸ್ಕರ ಶೆಟ್ಟಿ ನೆಲ್ಯಾಡಿ ,ಸೆಬಾಸ್ಟಿಯನ್‌ಮಾದೇರಿ ,ಬಾಲಕೃಷ್ಣ ಗೌಡ ಕೌಕ್ರಾಡಿ ,ಮಾರ್ಷಲ್‌ಡಿಸೋಜ ಕಟ್ಟೆಮಜಲು ,ಜನಜಾಗೃತಿ ವೇದಿಕೆಯ ಸದಸ್ಯರಾದ ಶಿವಪ್ರಸಾದ ರೈ ಮೈಲೇರಿ ,ಬಾಲಕೃಷ್ಣ ಹಾರ್ಪಳ, ಬಿಳಿನೆಲೆ ವಲಯ ಮೇಲ್ವಿಚಾರಕ ಆನಂದ , ಸೇವಾ ಪ್ರತಿನಿಧಿಗಳಾದ ಹೇಮಾವತಿ ,ಅನುಷಾ , ಕವಿತಾ ,ನಮಿತಾ ,ಸುಮನ,ಮೋಹಿನಿ ,ವೇದಾವತಿ ಪಾಲ್ಗೊಂಡಿದ್ದರು.

ಗ್ರಾಮಾಭಿವೃದ್ದಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಎನ್. ನಾವೂರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.,ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನೆಲ್ಯಾಡಿ ವಲಯ ಮೇಲ್ವಿಚಾರಕ ವಿಜೇಶ್‌ಜೈನ್‌ವಂದಿಸಿದರು.ಜನಜಾಗೃತಿ ಪ್ರಾದೇಶಿಕ ಕಚೇರಿ ಉಡುಪಿಯ  ಯೋಜನಾಧಿಕಾರಿ  ಗಣೇಶ್‌ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಸೋಮೇಶ್‌,ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್‌ಆಲಾಜೆ ಸಹಕರಿಸಿದರು.

LEAVE A REPLY

Please enter your comment!
Please enter your name here