ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಇದರ ರಾಷ್ಟ್ರಮಟ್ಟದ ಈಜು ಸ್ಪರ್ಧೆಯು ಬೆಂಗಳೂರಿನಲ್ಲಿ ಅ. 27ರಂದು ನಡೆದಿದ್ದು, ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 7ನೇ ತರಗತಿ ವಿದ್ಯಾರ್ಥಿನಿ ಲಾಸ್ಯ ಕಿಶನ್ ಅವರು ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿ SGFl(School Games Federation of India) ಗೆ ಆಯ್ಕೆಯಾಗಿರುತ್ತಾರೆ. ಮಾತ್ರವಲ್ಲದೆ, 50 ಮೀ. ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕವನ್ನೂ ಪಡೆದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಕಿಶನ್ ಡಿ.ಪಿ ಹಾಗೂ ದೀನಾ ಕಿಶನ್ ಅವರ ಪುತ್ರಿಯಾಗಿರುವ ಇವರು, ಪುತ್ತೂರಿನ ಶಿವರಾಮ ಕಾರಂತ ಬಾಲವನದ ಈಜು ತರಬೇತಿ ಕೇಂದ್ರದ ತರಬೇತುದಾರ ದೀಕ್ಷಿತ್ ಅವರಿಂದ ತರಬೇತಿ ಪಡೆದಿರುತ್ತಾರೆ.