ಪುತ್ತೂರು: ಜಿಎಲ್ ಒನ್ ಮಾಲ್, ಸುದ್ದಿ ಸಮೂಹ ಸಂಸ್ಥೆ, ಲಯನ್ಸ್ ಕ್ಲಬ್ ಪುತ್ತೂರು, ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಮತ್ತು ರೋಟರಿ ಕ್ಲಬ್ ಯುವ ಜಂಟಿ ಆಶ್ರಯದಲ್ಲಿ ನ.11ರ ಅಪರಾಹ್ನ 2.30ಕ್ಕೆ ಪುತ್ತೂರು ಜಿಎಲ್ ಒನ್ ಮಾಲ್‌ನಲ್ಲಿ ಗೂಡುದೀಪ ರಚನಾ ಸ್ಪರ್ಧೆ ಸೀಸನ್ – 3 ನಡೆಯಲಿದೆ. ಸುರೇಶ್ ಶೆಟ್ಟಿ ಈವೆಂಟ್ಸ್ ಆಂಡ್ ಮಾನೇಜ್ಮೆಂಟ್ ಇದರ ನೇತೃತ್ವ ವಹಿಸಲಿದ್ದು, ಸಂಜೆ 7ರ ಬಳಿಕ ಬಹುಮಾನ ವಿತರಣೆ, ಎಕ್ಸ್ಟ್ರೀಮ್ ಡಾನ್ಸ್ ಕ್ರಿವ್ ತಂಡದಿಂದ ಸಾಂಸ್ಕೃತಿಕ ಕಾರ‍್ಯಕ್ರಮ ಮತ್ತು ಹೊಳ್ಳ ಕ್ರಾಕರ್ಸ್‌ರವರಿಂದ ಸುಡುಮದ್ದು ಪ್ರದರ್ಶನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಜಿಎಲ್ ಸಂಸ್ಥೆಯ ಮಾಲಕ ಬಲರಾಮ ಆಚಾರ್ಯ, ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಆಯುರ್ವೇದ ಮತ್ತು ಯೋಗ ಕನ್ಸಲ್ಟೆಂಟ್ ಡಾ. ಚೇತನಾ ಅಡಿಗ, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸದಾಶಿವ ಟಿ, ಜನ್ಮ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಹರ್ಷ ಕುಮಾರ್ ರೈ, ಸುದ್ದಿ ಪುತ್ತೂರು ಸಿಇಒ ಸೃಜನ್ ಉರುಬೈಲು, ಪುತ್ತೂರು ರೋಟರಿ ಕ್ಲಬ್ ಯುವ ಇದರ ಅಧ್ಯಕ್ಷ ಪಶುಪತಿ ಶರ್ಮಾ ಭಾಗವಹಿಸಲಿದ್ದಾರೆ.
ವಿಜೇತರಿಗೆ ಪ್ರಥಮ ಬಹುಮಾನವಾಗಿ ಎಸ್ ಆರ್ ಕೆ ಲ್ಯಾಡರ್ಸ್ ಇವರಿಂದ 9999 ದ್ವಿತೀಯ ಬಹುಮಾನವಾಗಿ ಜನ್ಮ ಫೌಂಡೇಶನ್ ನಿಂದ 5555 ಹಾಗೂ ತೃತೀಯ ಬಹುಮಾನವಾಗಿ ಅಶೋಕ್ ಜ್ಯುವೆಲ್ಸ್ ಇವರಿಂದ 3333 ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಮುಳಿಯ ಜ್ಯುವೆಲ್ಸ್ ವತಿಯಿಂದ ಬೆಳ್ಳಿ ನಾಣ್ಯಗಳು ದೊರಕಲಿದೆ.
ಪಲಾರ, ತಮನ್ವಿ ಸಿಲ್ಕ್ ಆಂಡ್ ಸಾರಿ, ಜಿಎಲ್ ಆಚಾರ್ಯ ಜ್ಯುವೆಲ್ಸ್, ಲಹರಿ ಡ್ರೈ ಫ್ರೂಟ್ಸ್, ಫನ್ ಗ್ಯಾಲಕ್ಸಿ, ಕುಮ್ ಕುಮ್ -ಫ್ಯಾಷನ್, ಗೀತಾ ಬಾರ್ ಆಂಡ್ ರೆಸ್ಟೋರೆಂಟ್, ಪಶುಪತಿ ಎಲೆಕ್ಟ್ರಿಕಲ್, ಸಪ್ತಗಿರಿ ಸ್ಟೀಲ್ ಆಂಡ್ ಮೆಟಲ್ಸ್, ಪುತ್ತೂರು ಡಯೊಗ್ನೋಸ್ಟಿಕ್ ಆಂಡ್ ರಿಸರ್ಚ್ ಸೆಂಟರ್, ಮಾನಕ ಜ್ಯುವೆಲ್ಸ್, ಅಕ್ಷಯ ಕಾಲೇಜು, ವಿಜಿತ್ ಜ್ಯುವೆಲ್ಸ್, ಐಶ್ವರ್ಯ ಹರ್ಬಲ್ ಬ್ಯೂಟಿ ಪಾರ್ಲರ್, ಉದಯಗಿರಿ ಬಾರ್‌ಆಂಡ್ ರೆಸ್ಟೋರೆಂಟ್, ಚಿತ್ತಾರದವರು ಸಹಕರಿಸಲಿದ್ದಾರೆ.