ಮೈಸೂರು ವಿಭಾಗ ಮಟ್ಟದ ಕಬಡ್ಡಿ:ರಾಮಕುಂಜ ಕ.ಮಾ ಪ್ರೌಢಶಾಲೆ ಪ್ರಥಮ

0

ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಮಂಡ್ಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.


ವಿದ್ಯಾರ್ಥಿಗಳ ಈ ಸಾಧನೆಯು ರಾಮಕುಂಜ ಸಂಸ್ಥೆಯ ಇತಿಹಾಸದಲ್ಲಿ ಪ್ರಪ್ರಥಮವಾದುದು. ತಂಡದ ನಾಯಕ ಕಾರ್ತಿಕ್ ಬೆಸ್ಟ್ ರೈಡರ್ ಮತ್ತು ಶ್ರೇಯಸ್ ಬೆಸ್ಟ್ ಕ್ಯಾಚರ್ ಪ್ರಶಸ್ತಿ ಪಡೆದರು. ಶಾಲೆಯ ವಿದ್ಯಾರ್ಥಿಗಳಾದ ಪ್ರೀತಮ್, ಸತ್ಯ, ಶ್ರೇಯಸ್, ಹಿತೇಶ್, ನಿತೇಶ್ ಗೌಡ, ಯಶವಂತ, ಮೌನೇಶ್, ದಿಲೀಪ್, ಮಹಮ್ಮದ್ ರೈಜ್, ಕೃತಿಕ್, ನಿಖಿಲ್ ಎನ್ ಡಿ,
ಸಂನ್ವಿತ್ ತಂಡವನ್ನು ಪ್ರತಿನಿಧಿಸಿದ್ದರು. ತಂಡಕ್ಕೆ ಮಾಧವ ಬಿ.ಕೆ, ಜಸ್ವಂತ್ ಹಾಗೂ ಮಂಜುನಾಥ್‌ರವರು ತರಬೇತಿ ನೀಡಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್‌ನ ಮಾಲಕರಾದ ಕೇಶವ ಎ. ಹಾಗೂ ಪಿಡಬ್ಲ್ಯುಡಿ ಇಂಜಿನಿಯರ್ ಪ್ರಮೋದ್‌ರವರು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಮ್ಯಾಟ್ ವ್ಯವಸ್ಥೆ ಮಾಡಿ ಸಹಕರಿಸಿದರು. ರಾಮಕುಂಜ ಗ್ರಾಮ ಪಂಚಾಯಿತಿಯವರು ವಿದ್ಯಾರ್ಥಿಗಳ ಸಾಧನೆಗೆ ಸಹಕರಿಸಿದ್ದರು. ಕ್ರೀಡಾಪಟುಗಳಿಗೆ ಹಿರಿಯ ವಿದ್ಯಾರ್ಥಿ ಚಂದನ್‌ರವರು ಟ್ರ್ಯಾಕ್ ಶೂಟ್ ನೀಡಿ ಸಹಕರಿಸಿದ್ದರು. ಶಾಲಾ ಮುಖ್ಯಗುರು ಸತೀಶ್ ಭಟ್, ಶಾಲಾ ಶಿಕ್ಷಕವೃಂದ ಹಾಗೂ ಆಡಳಿತ ಮಂಡಳಿಯವರು ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದರು.

LEAVE A REPLY

Please enter your comment!
Please enter your name here