ಕೆಯ್ಯೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರುನಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಕೆಪಿಎಸ್ ಕೆಯ್ಯೂರಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಅತ್ಯಧಿಕ ಅಂಕಗಳನ್ನು ಪಡೆದ ಶಾಲೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಕೆ.ಇ ಮಹಮ್ಮದ್ ಮಿಕ್ ದಾದ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ದೀಪ್ತಿ ಕೆ ಸಿ ಕವನ ವಾಚನದಲ್ಲಿ ಪ್ರಥಮ, ಅಹಮ್ಮದ್ ಫರಾಜ್ ಅರೇಬಿಕ್ ಪಠಣದಲ್ಲಿ ಪ್ರಥಮ, ಸೌಜನ್ಯ ರೈ ಹಾಗೂ ದೀಪ್ತಿ ಕೆ ಸಿ ಇವರ ತಂಡ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಲ್ಲದೇ ಅಸ್ಮಿತಾ ಕನ್ನಡ ಭಾಷಣ ಸ್ಪರ್ಧೆಯಲ್ಲಿ ತೃತೀಯ, ಜಯಲಕ್ಷ್ಮಿ ಭಾವಗೀತೆಯಲ್ಲಿ ತೃತೀಯ, ದಿವ್ಯಾ ಜನಪದ ಗೀತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನವೆಂಬರ್ 20 ಹಾಗೂ 21 ರಂದು ಕೆಪಿಎಸ್ ಕೆಯ್ಯೂರಿನಲ್ಲಿ ನಡೆಯಲಿದೆ.