ವಿದ್ಯಾಭಾರತಿ ರಾಷ್ಟ್ರಮಟ್ಟದ ಕ್ರೀಡಾಕೂಟ: ವಿವೇಕಾನಂದ ಆ.ಮಾ ಶಾಲಾ ವಿದ್ಯಾರ್ಥಿಗಳ ಸಾಧನೆ

0

9 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ – 9 ವಿದ್ಯಾರ್ಥಿಗಳು ಎಸ್.ಜಿ.ಎಫ್.ಐ ಗೆ ಆಯ್ಕೆ

ಪುತ್ತೂರು:ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ವತಿಯಿಂದ ನಡೆಸಲ್ಪಡುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ದಿನಾಂಕ ನವೆಂಬರ್ 4, ರಿಂದ  8 ರವರೆಗೆ ಬಿಹಾರದ ಬೆಟಿಯಾದಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ವಿದ್ಯಾರ್ಥಿಗಳು ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿ, 9 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪಡೆಯುವ ಮೂಲಕ 9 ವಿದ್ಯಾರ್ಥಿಗಳು ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಬಾಲಕಿಯರ ವಿಭಾಗ:

ಸಮೃದ್ಧಿ ಜೆ ಶೆಟ್ಟಿ 10ನೇ ತರಗತಿ 100 ಮೀಟರ್ ಹರ್ಡಲ್ಸ್ ದಲ್ಲಿ ಚಿನ್ನದ ಪದಕ, ಸಾನ್ವಿ ಎಸ್ ಪಿ, 10ನೇ ತರಗತಿ-ತ್ರಿವಿಧ ಜಿಗಿತದಲ್ಲಿ ಚಿನ್ನದ ಪದಕ, 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ,  ರಿಧಿ ಸಿ ಶೆಟ್ಟಿ, 10ನೇ ತರಗತಿ – 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, ಡಿಂಪಲ್ ಶೆಟ್ಟಿ 9ನೇ ತರಗತಿ- 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಕೃತಿ ಕೆ 9ನೇ ತರಗತಿ- 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 3000 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಅಮೃತಾ ಬಿ.ಎ 9ನೇ ತರಗತಿ – 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ, 3000 ಮೀಟರ್ ಓಟದಲ್ಲಿ ಕಂಚಿನ ಪದಕ, ಎಂ ಪವಿತ್ರ 10ನೇ ತರಗತಿ ಹ್ಯಾಮರ್ ತ್ರೋ ದಲ್ಲಿ ಬೆಳ್ಳಿ ಪದಕವನ್ನು  ಪಡೆಯುವುದರೊಂದಿಗೆ ಒಟ್ಟು 40ಅಂಕಗಳೊಂದಿಗೆ 17ರ ವಯೋಮಾನದ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

17ರ ವಯೋಮಾನದ ಬಾಲಕರ ವಿಭಾಗ:
ಸಾತ್ವಿಕ್ ಆರ್ 10ನೇ ತರಗತಿ 110 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ,  ಸಚಿತ್ ಪಿಕೆ 10ನೇ ತರಗತಿ 4×400 ಮೀಟರ್ ರಿಲೇಯಲ್ಲಿ ಕಂಚಿನಪದಕ ಪಡೆದಿರುತ್ತಾರೆ.

17ರ ವಯೋಮಾನದ ಬಾಲಕಿಯರು 4×400 ಮೀಟರ್ ರಿಲೇ ಓಟದಲ್ಲಿ ಒಂದೇ ಸಂಸ್ಥೆಯ 4 ವಿದ್ಯಾರ್ಥಿನಿಯರು ಭಾಗವಹಿಸಿ, ಈ ಹಿಂದಿನ ದಾಖಲೆಯನ್ನು  ಸರಿಗಟ್ಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿರುತ್ತಾರೆ.

ಇದಲ್ಲದೆ 14ರ ವಯೋಮಾನದ ಬಾಲಕರ ವಿಭಾಗದಲ್ಲಿ 400ಮೀ ಓಟದಲ್ಲಿ ಚೇತಸ್.ಪಿ.ವೈ, 8ನೇ ತರಗತಿ ಹಾಗೂ 17ರ  ವಯೋಮಾನದ  ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ಮಿಲನ್.ಎನ್.ಬಿ, 10ನೇ ತರಗತಿ ಭಾಗವಹಿಸಿರುತ್ತಾರೆ ಎಂದು ಶಾಲಾ  ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here