ದಾಖಲೆಯ ಕಲೆಕ್ಷನ್‌ ಜೊತೆ ʼಪುಳಿಮುಂಚಿʼ ಯಶಸ್ವಿ 3ನೇ ವಾರ ಸಿನಿ ಪ್ರಿಯರಿಗೆ ಸಿಗಲಿದೆ 2.8 ಲಕ್ಷ ರೂ. ಮೌಲ್ಯದ ಮೋಟಾರ್‌ ಬೈಕ್

0

ಪುತ್ತೂರು: ಬಹು ನಿರೀಕ್ಷಿತ ಹಾಸ್ಯಮಯ ʼಪುಳಿಮುಂಚಿʼ ತುಳು ಚಿತ್ರ ಪುತ್ತೂರು ಸೇರಿದಂತೆ ಕರಾವಳಿಯಾದ್ಯಂತ ತೆರೆ ಕಂಡು, ಕರಾವಳಿ ಜನತೆಯ ಮನ ಗೆದ್ದು, ಇದೀಗ ಮೂರನೇ ವಾರದಲ್ಲೂ ಭರ್ಜರಿ ಪ್ರದರ್ಶನ ನೀಡಿ ಯಶಸ್ಸನ್ನು ಕಂಡಿದೆ.

ಬಿಗ್‌ ಸಿನಿಮಾಸ್‌ ಸಹಿತ ಮಲ್ಟಿಫೆಕ್ಟ್‌, ಸಿಂಗಲ್‌ ಥಿಯೇಟರ್‌ ಗಳಲ್ಲಿ ಈ ತುಳು ಸಿನಿಮಾ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಸೈ ಎನಿಸಿದ್ದು, ಎಲ್ಲೆಡೆಯೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ದಾಖಲೆಯ ಕಲೆಕ್ಷನ್‌ ಜೊತೆಗೆ ಸಿನಿ ಪ್ರಿಯರಿಗಾಗಿ ಭರ್ಜರಿ ಉಡುಗೊರೆಯೊಂದನ್ನು ನೀಡ ಬಯಸಿದೆ. ಅದಕ್ಕಾಗಿಯೇ ಲಕ್ಕಿ ಕೂಪನ್‌ ಮೂಲಕ ಸುಝುಕಿ ಕಂಪೆನಿಯ ರೂ.2.8 ಲಕ್ಷ ಮೌಲ್ಯದ ಮೋಟಾರ್‌ ಬೈಕ್‌ ಗೆಲ್ಲುವ ಅವಕಾಶವನ್ನು ಸಿನಿಪ್ರಿಯರಿಗಾಗಿ ಚಿತ್ರ ತಂಡ ಆಯೋಜನೆ ಮಾಡಿದೆ. ಈ ಅದೃಷ್ಟ ಚೀಟಿ ಡ್ರಾ ನ.14 ರಂದು ನಡೆಯಲಿದೆಯೆಂದು ಆಯೋಜಕರು ತಿಳಿಸಿದ್ದಾರೆ.

ನರ್ಸಿಂಗ್‌ ತರಬೇತಿ ನೀಡುತ್ತಿರುವಂತಹ ಹೆಸರಾಂತ ಹೆಚ್‌.ಪಿ.ಆರ್‌ ಫೌಂಡೇಶನ್‌ ಇದರ ಮುಖ್ಯಸ್ಥ ಹರಿಪ್ರಸಾದ್‌ ರೈ ಮಠಂತಬೆಟ್ಟು ನಿರ್ಮಾಣದ, ತ್ರಿಶೂಲ್‌ ಶೆಟ್ಟಿ ನಿರ್ದೇಶನದ ಪುಳಿಮುಂಚಿ ಚಿತ್ರಕ್ಕೆ ಕಿಶೋರ್‌ ಕುಮಾರ್‌ ಶೆಟ್ಟಿ ಸಂಗೀತ ನೀಡಿದ್ದು, ಮಯೂರ್‌ ಆರ್‌ ಶೆಟ್ಟಿ ಸಾಹಿತ್ಯ ಮತ್ತು ಚಿತ್ರೀಕರಣ ಮಾಡಿದ್ದಾರೆ. ವಿನೀತ್‌ ಕುಮಾರ್‌ ನಾಯಕ ನಟನಾಗಿ, ಸಮತಾ ಅಮೀನ್‌ ನಾಯಕಿಯಾಗಿರುವ ಈ ಚಿತ್ರದಲ್ಲಿ ರಾಹುಲ್‌ ಅಮೀನ್‌, ಸ್ವರಾಜ್‌ ಶೆಟ್ಟಿ, ಆರಾಧ್ಯ ಶೆಟ್ಟಿ, ನವೀನ್‌ ಡಿ.ಪಟೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರು, ಸಾಯಿಕೃಷ್ಣ ಕುಡ್ಲ, ರವಿ ರಾಮಕುಂಜ, ಸಂದೀಪ್‌ ಶೆಟ್ಟಿ ಬೈಲೂರು, ಉಮೇಶ್‌ ಮಿಜಾರ್‌, ಪಿಂಕಿ ರಾಣಿ, ಸಂತೋಷ್‌ ಶೆಟ್ಟಿ, ಅದ್ವಿಕಾ ಶೆಟ್ಟಿ, ತಾರಾಂಗಣದಲ್ಲಿದ್ದಾರೆ. ಕಿರಿಯರಿಂದ ಹಿರಿಯರವರೆಗೂ ಎಲ್ಲಾ ವರ್ಗದ ಜನತೆ ಚಿತ್ರಕ್ಕೆ ಸಂಪೂರ್ಣ ಬೆಂಬಲವನ್ನಿತ್ತು ಪ್ರೋತ್ಸಾಹಿಸಿ ಬೆನ್ನು ತಟ್ಟಿರುವುದಕ್ಕೆ ಚಿತ್ರತಂಡ ಕೃತಜ್ಷತೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here