ಕಿಲ್ಲೆ ಮೈದಾನದಲ್ಲಿ ಲಯನ್ಸ್ ಇಂಟರ್ನ್ಯಾಷನಲ್ ಲಿಯೋ ಕ್ಲಬ್ ಪುತ್ತೂರ್ದ ಮುತ್ತುರವರಿಂದ ಪರಿಸರ ಸ್ನೇಹಿ ಪಟಾಕಿ ಸ್ಟಾಲ್ ಆರಂಭ

0

ಪುತ್ತೂರು: ಕೋರ್ಟ್ ರಸ್ತೆಯ ಕಿಲ್ಲೆ ಮೈದಾನದಲ್ಲಿ ಲಯನ್ಸ್ ಇಂಟರ್ನ್ಯಾಷನಲ್, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ ವತಿಯಿಂದ ಸಮಾಜ ಸೇವಾ ನಿಧಿ ಸಹಾಯಾರ್ಥವಾಗಿ ನಡೆಸಲ್ಪಡುವ ಪರಿಸರ ಸ್ನೇಹಿ ಪಟಾಕಿ ಸ್ಟಾಲ್ ನ.11 ರಿಂದ ಆರಂಭಗೊಂಡು 14ರ ವರೆಗೆ ನಡೆಯಲಿದ್ದು ಇದರ ಉದ್ಘಾಟನಾ ಕಾರ್ಯಕ್ರಮ ನ.11 ರಂದು ನೆರವೇರಿತು.
ಪಟಾಕಿ ಸ್ಟಾಲ್ ಅನ್ನು ಲಯನ್ಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ಹೇಮನಾಥ್ ಶೆಟ್ಟಿ ಎಂಜೆಎಫ್ ಇವರು ಉದ್ಘಾಟಿಸಿ ಮಾತನಾಡಿ, ಕೆಲವು ವರುಷಗಳಿಂದ ಪುತ್ತೂರಿನಲ್ಲಿ ಹಲವಾರು ಉತ್ತಮ ಸಮಾಜ ಸೇವಾ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಪುತ್ತೂರ್ದ ಮುತ್ತು ಲಯನ್ಸ್ ಮತ್ತು ಲಿಯೋ ಸಂಸ್ಥೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ಪುತ್ತೂರಿನ ಮಹಾಜನತೆಯೂ ಆಶೀರ್ವಾದ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಎನ್ ರವೀಂದ್ರ ಪೈ, ಕೋಶಾಧಿಕಾರಿ ಮೊಹಮ್ಮದ್ ಹನೀಫ್, ಲಿಯೋ ಜಿಲ್ಲಾಧ್ಯಕ್ಷೆ ರಂಜಿತಾ ಶೆಟ್ಟಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಎಂಜೆಎಫ್, ಲಯನ್ಸ್ ಪ್ರಾಂತೀಯ ಅಂಬಾಸಿಡರ್ ಗಣೇಶ್ ಶೆಟ್ಟಿ, ಲಿಯೋ ಜಿಲ್ಲಾ ಮಾರ್ಗದರ್ಶಕಿ ಪ್ರಿಯಲತಾ ಮಸ್ಕರೇನಸ್, ಪುತ್ತೂರು ಕಾವು ಲಯನ್ಸ್ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಉದ್ಯಮಿ ಅಬೂಬಕ್ಕರ್ ಮುಲಾರ್, ಉದ್ಯಮಿ ಸೀತಾರಾಮ ಶೆಟ್ಟಿ ಬನ್ನೂರು, ಯುವ ಬಂಟರ ಸಂಘದ ಕೋಶಾಧಿಕಾರಿ ಕೆ ಸಿ ಅಶೋಕ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ದಿವಿತ್ ಯು ರೈ, ಸಹನ್ ಶೆಟ್ಟಿ ಅಡ್ಯಾರ್, ನಗರಸಭೆ ಮಾಜಿ ಸದಸ್ಯರು ಅನ್ವರ್ ಖಾಸಿಂ, ಲ್ಯಾನ್ಸನ್ ಮಸ್ಕರೇನಸ್ ಇತರರು ಉಪಸ್ಥಿತರಿದ್ದರು.

ರಿಯಾಯಿತಿ ದರದಲ್ಲಿ ಮಾರಾಟ…
ಪ್ರಥಮವಾಗಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಈ ಬಾರಿ ಕಿಲ್ಲೆ ಮೈದಾನದಲ್ಲಿ ಪಟಾಕಿ ಸ್ಟಾಲ್ ಅನ್ನು ಹಾಕಲಾಗಿದ್ದು ಸಂಘಟನೆಯು ಸಮಾಜ ಸೇವಾ ನಿಧಿಗಾಗಿ ಉದ್ದೇಶವನ್ನು ಹೊಂದಲಾಗಿದೆ. ಈ ಪಟಾಕಿ ಸ್ಟಾಲ್ ನಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಪಟಾಕಿಗಳನ್ನು ನೀಡಲಾಗುತ್ತಿದ್ದು ಗ್ರಾಹಕರು ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here