ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಇದರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜ್ ಕೊಂಬೆಟ್ಟು, ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಹಲವಾರು ಬಹುಮಾನಗಳೊಂದಿಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಇಂಗ್ಲೀಷ್ ಭಾಷಣದಲ್ಲಿ ಪ್ರಕೃತಿ ಬಿ ಜಿ ರೈ ಪ್ರಥಮ , ಜಾನಪದ ಗೀತೆಯಲ್ಲಿ ಸುಪ್ರಜಾ ರಾವ್ ಪ್ರಥಮ, ನಿಲಿಷ್ಕ ಕೆ ಪುತ್ರಿ) ಚಿತ್ರಕಲೆಯಲ್ಲಿ ಪ್ರಥಮ,ಭರತನಾಟ್ಯದಲ್ಲಿ ಕೀರ್ತನ ವರ್ಮ ಪ್ರಥಮ,ಛದ್ಮ ವೇಷದಲ್ಲಿ ಎಮ್ ಶ್ರೀರಂಜಿನಿ ದ್ವಿತೀಯ, ಚರ್ಚಾ ಸ್ಪರ್ಧೆಯಲ್ಲಿ ಅರ್ಚನಾ ಕೆ ತೃತೀಯ, ಸಂಸ್ಕೃತ ಭಾಷಣದಲ್ಲಿ ತನ್ಮಯಿವಾಗ್ಲೆ ತೃತೀಯ ಹಾಗೂ ನಂದನ,ಅನನ್ಯ ನಾವಡ, ಸಾನ್ವಿ ಕೆ, ಧನ್ವಿ ಎ, ಕೆ. ಪ್ರಮಥೇಷ ಶರ್ಮ, ಶ್ರೀಶ ಕೃಷ್ಣ ಜಿ.ಎಸ್ ಕವ್ವಾಲಿಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.