ಮಂಗಳೂರು/ಪುತ್ತೂರು: ತುಳು ಭಾಷೆ ತಾಯಿ ಭಾಷೆ, ತುಳುವಿನಲ್ಲಿ ನಿರ್ಮಾಣವಾಗುವ ಎಲ್ಲಾ ಸಿನಿಮಾಗಳನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲೇ ವೀಕ್ಷಿಸಬೇಕು. ಆವಾಗ ತುಳು ಚಿತ್ರರಂಗ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದು ಖ್ಯಾತ ಚಲನ ಚಿತ್ರ ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್ ತಿಳಿಸಿದರು.
ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ಧರ್ಮದೈವ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ
ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ಧರ್ಮದೈವ ತುಳು ಸಿನಿಮಾದ ಟೀಸರ್ ಬಿಡುಗಡೆಗೊಳಿಸಿ ಮಾತನಾಡಿದರು.
ದೈವ ನಂಬಿದವರನ್ನು ಯಾವತ್ತೂ ಕೈ ಬಿಟ್ಟಿಲ್ಲ. ದೈವಾರಾಧನೆ ಭೂತಾರಾದನೆ ಇಲ್ಲಿಯ ಸಂಪ್ರದಾಯ. ದೈವದ ಮೇಲೆ ಭಕ್ತಿ, ಭಯ ಬೇಕು. ದೈವರಾಧನೆ ತುಳುನಾಡಿನ ಮಣ್ಣಿನ ಶಕ್ತಿ. ದೈವರಾದನೆಯನ್ನು ಆರಾಧಿಸಿದಾಗ ದೈವದ ಕಾರಣಿಕವನ್ನು ಕಾಣಲು ಸಾಧ್ಯವಾಗುತ್ತದೆ ಎಂದರು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರದಲ್ಲಿ ದೈವಿಕ ಶಕ್ತಿಯನ್ನು ನಾವು ಕಂಡಿದ್ದೇವೆ. ಕಾಂತಾರ ಸಿನಿಮಾ ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆಯಿತು. ಈಗ ನಮ್ಮ ತುಳುಭಾಷೆಯಲ್ಲಿ ನಿರ್ಮಾಣವಾಗಿರುವ ಧರ್ಮದೈವ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ಕಾಂತಾರ ಸಿನಿಮಾರಂಗಕ್ಕೆ ಭದ್ರಬುನಾದಿ ಹಾಕಿದೆ. ಧರ್ಮ ದೈವ ಸಿನಿಮಾ ಕೂಡಾ ಯಶಸ್ಸನ್ನು ದಾಖಲಿಸಲಿ ಎಂದರು. ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ಹಾಸ್ಯ ಸಿನಿಮಾಗಳ ಜೊತೆಗೆ ಧರ್ಮದೈವದಂತಹ ಗಂಭೀರ ಚಿತ್ರಗಳು ಬರಬೇಕು. ಇಂತಹ ಸಿನಿಮಾಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದರು.
ಸಮಾರಂಭದಲ್ಲಿ ಕಿಶೋರ್ ಡಿ ಶೆಟ್ಟಿ, ಲೀಲಾಧರ ಶೆಟ್ಟಿ ಕಾಪು, ಚೇತನ್ ರೈ ಮಾಣಿ, ಅಕ್ಷಿತ್ ಸುವರ್ಣ, ರವೀಂದ್ರ ಶೆಟ್ಟಿ ನುಳಿಯಾಲು, ಜಯಂತ ನಡುಬೈಲ್, ಕೆ ಕೆ ಪೇಜಾವರ್, ಸಚಿನ್ ಉಪ್ಪಿನಂಗಡಿ, ಕಿಶೋರ್,ಸುಹಾನ್ ಆಳ್ವ, ಯೊಗೀಶ್ ಶೆಟ್ಟಿ ಜಪ್ಪು, ಸಹಜ್ ರೈ ಬಳಜ್ಜ, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ರಮೇಶ್ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು. ಚಿತ್ರ ತಂಡದಲ್ಲಿ ಬಹುತೇಕ ಪುತ್ತೂರಿನವರೇ ಇದ್ದು ಕ್ಯಾಮರಾ, ಸಂಭಾಷಣೆ ಹಾಗೂ ಸಂಗೀತ ಎಲ್ಲರ ಗಮನ ಸೆಳೆದಿದೆ.