ಟೋಪ್ ಟೆ‌ನ್ ಲಕ್ಕಿ ಸ್ಕೀಂ ನ ಆರನೇ ಆವೃತಿಯ ಪ್ರಥಮ ಡ್ರಾ-ಬಂಪರ್ ಬಹುಮಾನ ಹೀರೋ ಡಿಲೆಕ್ಸ್ ಬೈಕ್ ವಿಜೇತರಾದ ಅಪರ್ಣಾ ಕೊಕ್ಕಡ

0

ಪುತ್ತೂರು: ಕಳೆದ ಆರು ವರುಷಗಳಿಂದ ಉಭಯ ಜಿಲ್ಲೆಗಳಲ್ಲಿ ವ್ಯವಹರಿಸುತ್ತಿರುವ ಟಾಪ್ ಟೆನ್ ಲಕ್ಕಿ ಸ್ಕೀಂ ಆರನೇ ಆವೃತಿಯ ಪ್ರಥಮ ಡ್ರಾ.ವು ಅ.13ರಂದು ಎಂ.ಟಿ.ರಸ್ತೆಯಲ್ಲಿರುವ ಎ.ಹೆಚ್. ಹಿಂದುಸ್ತಾನ್ ಸಿಟಿ ಮಾರ್ಕೆಟ್‌ನ ಪ್ರಥಮ ಮಹಡಿಯಲ್ಲಿರುವ ಟೋಪ್ ಟೆನ್‌ನ ಕಚೇರಿಯಲ್ಲಿ ನಡೆಯಿತು.

ಹೀರೋ ದ್ವಿಚಕ್ರ ವಾಹನಗಳ ವಿತರಕರಾಗಿರುವ ಅಕ್ಷಯ್ ಶೋರೂಂನ ಮ್ಹಾಲಕ ಶಿವಪ್ರಸಾದ್ ಡ್ರಾ. ನಡೆಸಿಕೊಟ್ಟರು. ಅಪರ್ಣಾ ಕೊಕ್ಕಡ ಬಂಪರ್ ಬಹುಮಾನ ಹೀರೋ ಡಿಲೆಕ್ಸ್ ಬೈಕ್‌ನ ವಿಜೇತರಾದರು. ಪ್ರವೀಣ್ ಬಲ್ನಾಡ್, ಅಶೋಕ್ ಆಲಂಕಾರು, ದಿನೇಶ್ ಭವನ ಲಾಡ್ಜ್‌ನ ಮ್ಯಾನೇಜರ್ ಪುನೀತ್, ಲಕ್ಕಿ ಸ್ಕಿಂ ಮುಖ್ಯಸ್ಥ ಜುನೈದ್ ಸಾಲ್ಮರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮನ್ಸೂರು ಕೆ.ಎಲ್ 17, ಆಸೀಫ್ ಬಲ್ನಾಡು, ಉಮ್ಮರ್ ಪೆರಿಗೇರಿ, ರಘು ದರ್ಬೆತ್ತಡ್ಕ, ಬಾತೀಷ ಬಲ್ನಾಡು ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತೀ ವಾರ ೨೦೦ ರೂಪಾಯಿ ಪಾವತಿಸಿ ಕಾರು ಗೆಲ್ಲುವ ಅವಕಾಶ

ಪ್ರತೀ ವಾರ 200 ರೂಪಾಯಿಯಂತೆ ನಲವತ್ತು ವಾರ ಪಾವತಿ ಮಾಡಬೇಕಾಗಿರುವ ಈ ಲಕ್ಕಿ ಸ್ಕೀಮ್ ನಲ್ಲಿ ಪ್ರತೀ ಸೋಮವಾರ ಕಚೇರಿಯಲ್ಲಿ ನೆರೆದಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಯಲಿದೆ. ಡ್ರಾ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ. ಡ್ರಾ ವಿಜೇತರಾಗದ ಸದಸ್ಯರಿಗೆ ಸ್ಕೀಂ ಕೂಪನ್ ನಲ್ಲಿ ನೀಡಿರುವ ವಸ್ತುಗಳ ಪೈಕಿ ತಮ್ಮಿಷ್ಟದ ಆಯ್ಕೆಯ ವಸ್ತುವನ್ನು ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here