





ಪುತ್ತೂರು; ಪಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ನ.11ರಂದು ನಡೆದ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕೈಕಾರ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹಲವು ಪ್ರಶಸ್ತಿಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಸಿಂಚನ 6ನೇ (ಪ್ರಥಮ), ಇಂಗ್ಲಿಷ್ ಕಂಠಪಾಠ ಅಕ್ಷತಾ 4ನೇ(ಪ್ರಥಮ), ಚದ್ಮ ವೇಷ ಗುರು ಪ್ರೀತಮ್ 2ನೇ(ದ್ವಿತೀಯ), ಚದ್ಮವೇಷದಲ್ಲಿ ಕೃತಿ ಶೆಟ್ಟಿ 7ನೇ ತರಗತಿ( ದ್ವಿತೀಯ) ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದಿದೆ. ಶಾಲಾ ಮುಖ್ಯ ಗುರುಗಳಾದ ರಾಮಣ್ಣ ರೈ, ಶಿಕ್ಷಕಿಯರಾದ ಜಯಶ್ರೀ, ಭಾರತೀ, ರಾಜೇಶ್ವರಿ, ಕುಮಾರಿ ಭವ್ಯ ಇವರ ಉಪಸ್ಥಿತಿಯಲ್ಲಿ ನೀಡಲಾಯಿತು.











