ಬೆಟ್ಟಂಪಾಡಿ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹ, ಪುಸ್ತಕ ಪ್ರದರ್ಶನ ಹಾಗೂ ವಾಚಕರ ಸಂಘದ ಉದ್ಘಾಟನೆ

0


ಓದುವಿಕೆ ಮನಸ್ಸಿನ ಒತ್ತಡಗಳನ್ನು ನಿವಾರಿಸುತ್ತದೆ : ಮೌನೇಶ್ ವಿಶ್ವಕರ್ಮ

ಪುತ್ತೂರು: ಸಾಹಿತ್ಯ ಪುಸ್ತಕಗಳ ಓದುವಿಕೆಯಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಬಹುದು. ಮತ್ತು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬಹುದೆಂದು ಪತ್ರಕರ್ತ ಹಾಗೂ ರಂಗ ನಿರ್ದೇಶಕರಾದ ಮೌನೇಶ್ ವಿಶ್ವಕರ್ಮರವರು ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ನಡೆದ ರಾಷ್ಟೀಯ ಗ್ರಂಥಾಲಯ ಸಪ್ತಾಹ, ಪುಸ್ತಕ ಪ್ರದರ್ಶನ ಮತ್ತು ರೀಡರ್ಸ್ ಕ್ಲಬ್ ಉದ್ಘಾಟಿಸಿ ನ.15ರಂದು ಮಾತನಾಡಿದರು. ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿ ಕಾಲೇಜಿನ ಗ್ರಂಥಾಲಯದಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಪರಿಚಯ ಮಾಡಿಕೊಳ್ಳುವುದಲ್ಲದೆ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರಗಳ ಪುಸ್ತಕಗಳನ್ನು ಓದಲು ಇಂತಹ ಕಾರ್ಯಕ್ರಮಗಳು ವೇದಿಕೆಯಾಗಲಿ ಎಂಬುದಾಗಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ವಿಭಾಗದ ಶಿಕ್ಷಕಿ ಪದ್ಮಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಐ ಕ್ಯೂ ಎ. ಸಿ ಸಂಚಾಲಕ ಡಾ. ಕಾಂತೇಶ್ ಎಸ್ ಕಾರ್ಯಕ್ರಮಕ್ಕೆ ಶುಭಕೋರಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಕರುಣಾಲಕ್ಷ್ಮಿ ಕೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನನ್ಯ ಅಡಿಗ, ವಿದ್ಯಾಶ್ರೀ, ದೀಕ್ಷಿತಾ, ನವ್ಯ ಪ್ರಾರ್ಥಿಸಿದರು. ಗ್ರಂಥಾಪಾಲಕ ರಾಮ ಕೆ ವಂದಿಸಿದರು. ಅನನ್ಯ ಅಡಿಗ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here