ಶೆಣೈ ಜ್ಯುವೆಲ್ಲರ‍್ಸ್ ನವೀಕರಣಗೊಂಡ ವಿಸ್ತೃತ ಮಳಿಗೆ ಶುಭಾರಂಭ

0

ಪುತ್ತೂರು: ಇಲ್ಲಿನ ಕೋರ್ಟುರಸ್ತೆಯಲ್ಲಿರುವ ಡಾ.ಎಂ.ಎಸ್ ಶೆಣೈ ಕ್ಲಿನಿಕ್ ಬಳಿ ಸತ್ಯಸಾಯಿ ಮಂದಿರದ ಎದುರುಗಡೆ ದಿ. ದಯಾನಂದ ಶೆಣೈಯರ ಪುತ್ರ ವರದರಾಜ ಶೆಣೈಯವರ ಮಾಲಕತ್ವದಲ್ಲಿ ನವೀಕರಣಗೊಂಡ ವಿಸ್ತೃತ ಚಿನ್ನಾಭರಣಗಳ ಮಳಿಗೆ ಶೆಣೈ ಜ್ಯುವೆಲ್ಲರ‍್ಸ್ ನ.16ರಂದು ಪೂಜಾ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು. ಮಾಲಕ ವರದರಾಜ್ ಶೆಣೈ ಅತಿಥಿಗಳನ್ನು ಸ್ವಾಗತಿಸಿ, ನಮ್ಮಲ್ಲಿ BIS ಹಾಲ್ ಮಾರ್ಕ್‌ನ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಚಿನ್ನಾಭರಣಗಳು ಹಾಗೂ ಬೆಳ್ಳಿಯ ಆಭರಣಗಳು ದೊರೆಯುತ್ತದೆ ಹಾಗೂ ಚಿನ್ನಾಭರಣಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿ ಕೊಡಲಾಗುವುದು ಎಂದು ಎಂದು ತಿಳಿಸಿ ಗ್ರಾಹಕರ ಸಹಕಾರ ಕೋರಿದರು. ಸಿದ್ಧಾರ್ಥ ಶೆಣೈ ವಂದಿಸಿದರು.

LEAVE A REPLY

Please enter your comment!
Please enter your name here