





ಪುತ್ತೂರು: ಈಡನ್ ಗ್ಲೋಬಲ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲರಾದ ರಂಝಿ ಮೊಹಮ್ಮದ್ ಕಾರ್ಯಕ್ರಮ ಉದ್ಘಾಟಿಸಿದರು. ಅರೇಬಿಕ್ ವಿಭಾಗದ ಮುಖ್ಯಸ್ಥ ರಶೀದ್ ಸಖಾಫಿ ಶುಭ ಹಾರೈಸಿದರು. ಮಕ್ಕಳ ದಿನಾಚರಣೆಯ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆಡಳಿತ ಸಮಿತಿಯ ಕಾರ್ಯದರ್ಶಿ ಬಶೀರ್ ಹಾಜಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಶುಭ ಹಾರೈಸಿದರು.ಶಿಕ್ಷಕರಾದ ಕುಮಾರಿ ಸಿನ್ವಾನ, ಶಾಕಿರ ಮತ್ತು ಇಮ್ತಿಯಾಝ್ ಸಿ.ಎಂ ಮಾತನಾಡಿದರು.


ಶಿಕ್ಷಕಿ ಫಾತಿಮತ್ ಸನನ್ ಸ್ವಾಗತಿಸಿ,ಶಿಕ್ಷಕಿ ಖತಿಜತುಲ್ ಸಬೀಲ ವಂದಿಸಿ, ಶಿಕ್ಷಕಿ ಫಹಿಮಾ ಬಾನು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.












