ಸಂತ ಫಿಲೋಮಿನಾ ಶಾಲೆಯಲ್ಲಿ ಮಕ್ಕಳ ಹಬ್ಬ

0

ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ದೀಪ ಬೆಳಗಿಸಿ ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವುದರ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಅತೀ ವಂದನೀಯ ಗುರು ಲಾರೆನ್ಸ್ ಮಸ್ಕರೇನ್ಹಸ್ , ಸಂತ ಫಿಲೋಮಿನಾ ಕ್ಯಾಂಪಸ್ ನಿರ್ದೇಶಕ ವಂದನೀಯ ಗುರು ಸ್ಟ್ಯಾನಿ ಪಿಂಟೋ , ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ , ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ್ ಆಳ್ವ ಹಾಗೂ ಸಹಕಾರ್ಯದರ್ಶಿ ನಯನಾ ರೈ , ಶಾಲಾ ಹಾಗೂ ಶಾಲಾ ನಾಯಕಿ ಆರಾಧ್ಯ ಆಳ್ವಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯಿನಿ ಭಗಿನಿ ಲೋರಾ ಪಾಯ್ಸ್ ಸ್ವಾಗತಿಸಿ,ಸಹ ಶಿಕ್ಷಕಿ ಜ್ಯೋತಿ ಪ್ರಿಯ ವಂದಿಸಿ,ಸಹ ಶಿಕ್ಷಕಿ ಮರಿಯಾ ಲೂಯಿಸಾ,, ಲವಿನಾ ಸ್ಟೆಲ್ಲಾ, ಸಹ ಶಿಕ್ಷಕಿ ದೀಪ್ತಿ ಡಲ್ಮೇದ ವಿವಿಧ ಕಾರ್ಯಕ್ರಮ ನಿರ್ವಹಸಿದರು. ಶಿಕ್ಷಕ ವೃಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.


LEAVE A REPLY

Please enter your comment!
Please enter your name here