ಅಕ್ಷಯ ಕಾಲೇಜಿನಲ್ಲಿ ಪಿಯು ವಿಭಾಗದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಅಟೆರ್ನಸ್ 2k23″

0

ಪುತ್ತೂರು:  ಸಂಪ್ಯದಲ್ಲಿ ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಜಿಲ್ಲೆಗಳ ಪಿಯು ವಿಭಾಗದ ಅಂತರ್ ಕಾಲೇಜ್ ಸಾಂಸ್ಕೃತಿಕ ಸ್ಪರ್ಧೆ ‘ಅಟೆರ್ನಸ್ 2k23″  ಇದರ ಉದ್ಘಾಟನಾ ಸಮಾರಂಭವು ನ.16 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲ ವಂ ರೆ. ಅಶೋಕ್ ರಾಯನ್ ಕ್ರಾಸ್ತರವರು, ಗ್ರಾಮೀಣ ಪ್ರದೇಶದಲ್ಲಿ ವೃತ್ತಿಪರ ಇಂದಿನ ಆಧುನಿಕ ಜಗತ್ತಿನಲ್ಲಿ ವೃತ್ತಿಪರ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆಯಿದ್ದು ಬೇಡಿಕೆಯೂ ಇದೆ. ಈ ನಿಟ್ಟಿನಲ್ಲಿ ಇಲ್ಲಿನ ಅಕ್ಷಯ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ಗಳನ್ನು ಆರಂಭಿಸಿ ಇಲ್ಲಿನ ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುವಂತಾಗಿದೆ. ಇಲ್ಲದಿದ್ದರೆ ಇಂತಹ ಕೋರ್ಸ್ ಗಳನ್ನು ಪಡೆಯಲು ದೂರದ ಊರುಗಳನ್ನು ಆಶ್ರಯಿಸಬೇಕಿತ್ತು ಎಂದು ಹೇಳಿ ಕೋರ್ಸ್ ಗಳಿಗೆ ಇರುವಂತಹ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷರಾದ  ಜಯಂತ ನಡುಬೈಲುರವರು ಮಾತನಾಡಿ, ಪಿಯು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಚುರಪಡಿಸಲು ಅಕ್ಷಯ ಕಾಲೇಜು ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತಿಭೆ ಇದೆ. ಆದರೆ ಆ ಪ್ರತಿಭೆಯ ಅನಾವರಣ ವಾಗಬೇಕಿದೆ ಎಂದು ಹೇಳಿ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕು| ಪ್ರಕೃತಿ ಪ್ರಾರ್ಥಿಸಿದರು.  ಕಾಲೇಜಿನ ಆಡಳಿತ ಅಧಿಕಾರಿ ಅರ್ಪಿತ್ ಟಿ ಎ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ರಶ್ಮಿ ಕೆ ವಂದಿಸಿದರು ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು|ಮೇಘಶ್ರೀ ಉದ್ಘಾಟಕರ ವ್ಯಕ್ತಿ ಪರಿಚಯ ಮಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು| ಭವ್ಯಶ್ರೀ ನಿರೂಪಿಸಿದರು.

Events:

  • ಫೇಸ್ ಆಫ್ ಅಟೆರ್ನಸ್

*ಫ್ಯಾನ್ಸಿ ಡ್ರೆಸ್ ರೋಲ್ ಪ್ಲೇ *ಕ್ವಿಜ್ *ಡಿಬೇಟ್ *ಸಮೂಹ ಗಾಯನ *ಸೋಲೊ ನೃತ್ಯ *ಬೆಂಕಿಯಿಲ್ಲದ ಅಡುಗೆ *ಪೇಪರ್ ಔಟ್ ಫಿಟ್ *ಪಾಟ್ ಡೆಕೋರೇಶನ್ *ಪೋಸ್ಟರ್ ಮೇಕಿಂಗ್*

LEAVE A REPLY

Please enter your comment!
Please enter your name here