ಕಾಣಿಯೂರು: ವಿದ್ಯಾಬೋಧೀನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಮಕ್ಕಳೇ ಶಾಲಾ ಅಂಗಳದಲ್ಲಿ ಬೆಳೆಸಿದ ಭತ್ತ ನಾಟಿ. ಕೊಯ್ಲು ಮಾಡಿ ತುಳು ನಾಡಿನ ಸಂಸ್ಕೃತಿ ಯಲ್ಲಿ ಬಾಳೆಎಲೆ ಯಲ್ಲಿ 10 ಬಗೆಯ ಪದಾರ್ಥಗಳ ಜೊತೆ ಹೊಸ ಅಕ್ಕಿ ಉಂಡೂ ಸಂತಸ ಪಟ್ಟರು. ಶಾಲೆಯ ಬಾಗಿಲುಗಳಿಗೆ ಬೆಳಗ್ಗೆ ಮಾವಿನ ಎಲೆ ಕಟ್ಟಿ ನಂತರ ಮಧ್ಯಾಹ್ನ ಪೋಷಕರ ಜೊತೆಯಲ್ಲಿ ಪುದ್ವಾರ್ ಊಟ ಮಾಡಿ ನಮ್ಮ ಸಂಸ್ಕೃತಿ ತಿಳಿದು ಕೊಂಡರು. ಈ ಸಂದರ್ಭದಲ್ಲಿ ಶಾಲಾ ಪೋಷಕ ವೃಂದ. ಎಸ್.ಡಿ. ಎಂ. ಸಿ ಸದಸ್ಯರು ಬೋಜನ ತಯಾರಿಯಲ್ಲಿ ಸಹಕರಿಸಿದರು. ಶಾಲಾ ಆಡಳಿತ ಮಂಡಳಿ ಶುಭ ಹಾರೈಕೆ ಮಾಡಿದರು. ಮಕ್ಕಳು ಪೋಷಕರ ಶಿಕ್ಷಕರ ಜೊತೆ ಸಂತಸ ಪಟ್ಟರು.