ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸಂಭ್ರಮ ಸಡಗರದ ಮಕ್ಕಳ ದಿನಾಚರಣೆ ಮತ್ತು ಸಾಮೂಹಿಕ ಹುಟ್ಟುಹಬ್ಬ

0


ಕಾಣಿಯೂರು: ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿನಲ್ಲಿ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿರುವ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ ಪೆರಾಜೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ, ಬಹುಮುಖ ಪ್ರತಿಭೆ ಸ್ವಸ್ತಿ ಕಾರ್ಯಕ್ರಮ ಉದ್ಘಾಟಿಸುತ್ತಾ ಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ “ಎಳೆಯ ಮಕ್ಕಳಾದ ನಾವು ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನದಂತೆ ಮುನ್ನಡೆದರೆ ನಮ್ಮ ಯಶಸ್ಸಿನ ಗುರಿಯನ್ನು ಸುಲಭವಾಗಿ ಮುಟ್ಟಲು ಸಾಧ್ಯ” ಎಂದರಲ್ಲದೆ ತನ್ನ ಸುಮಧುರ ಕಂಠದಿಂದ ಎಲ್ಲರನ್ನು ಮನರಂಜಿಸಿದರು. ಶಾಲಾ ನಾಯಕಿಯಾಗಿರುವ ಹತ್ತನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ನನ್ಮಯಿ ಎಂ ಸಭಾಧ್ಯಕ್ಷತೆಯನ್ನು ವಹಿಸಿ” ಸಂಸ್ಥೆಯಲ್ಲಿ ಸಿಗುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾ ಆದರ್ಶ ವಿದ್ಯಾರ್ಥಿಯಾಗಿದ್ದು ನಾವು ಇತರರಿಗೆ ಮಾರ್ಗದರ್ಶಕರಾದಾಗ ಸಮಾಜ ನಮ್ಮನ್ನು ಸುಲಭವಾಗಿ ಗುರುತಿಸುತ್ತದೆ” ಎಂದರು. ಮುಖ್ಯ ಅತಿಥಿಯಾಗಿರುವ ಸಂಸ್ಥೆಯ ರಾಷ್ಟ್ರಮಟ್ಟದ ಪ್ರತಿಭೆಗಳಾದ ಮೋನಿಶ್ ತಂಟೆಪ್ಪಾಡಿ ಮತ್ತು ಶ್ರೀಮಾ ಕೆ ಎಚ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರೆ , ರಾಜ್ಯಮಟ್ಟದ ಪ್ರತಿಭೆ ಸಾನ್ವಿಕ ಎಚ್ ತನ್ನ ಸಾಧನೆಗೆ ಸಂಸ್ಥೆ ನೀಡಿದ ಪ್ರೋತ್ಸಾಹ , ಯಶಸ್ಸಿಗೆ ಮೆಟ್ಟಿಲಾಗಿರುವ ಸರ್ವರನ್ನು ಸ್ಮರಿಸಿಕೊಂಡು ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಸರಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರಿನ ಸಂಗೀತ ಶಿಕ್ಷಕಿಯಾಗಿರುವ ಶುಭ ರಾವ್ ಹಾಡಿನ ಮೂಲಕ ಶುಭ ಹಾರೈಸಿದರು.
ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ಉತ್ತಮ ನೀತಿಕಥೆಯ ಮೂಲಕ ಮಕ್ಕಳ ಮನಗೆದ್ದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಾಲಾ ಟ್ರಸ್ಟಿ ವೃಂದ ಜೆ ರೈ , ಸಂಚಾಲಕರ ಮಾತೃಶ್ರೀ ಲಕ್ಷ್ಮಿ ಕರಿಯಪ್ಪ ರೈ ಮಾದೋಡಿ , ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಮ್ ಬಿ, ಮುಖ್ಯಗುರು ಸರಸ್ವತಿ ಎಂ, ಹಿರಿಯ ಶಿಕ್ಷಕಿಯರಾದ ಹೇಮಾ ನಾಗೇಶ್ ರೈ, ವಿನಯ ವಿ ಶೆಟ್ಟಿ, ಅನಿತಾ ಜೆ ರೈ ಶುಭ ಹಾರೈಸಿದರು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕ ಮಾತಿನೊಂದಿಗೆ ಮುಖ್ಯ ಅತಿಥಿಗಳ ಪರಿಚಯವನ್ನು ವಾಚಿಸಿದರು. ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಪ್ರಾರ್ಥಿಸಿದರು. ಶಿಕ್ಷಕಿ ಧನ್ಯ ಎಂ ಕೆ ಸ್ವಾಗತಿಸಿ ಶಿಕ್ಷಕಿ ಸುಷ್ಮಾ ಸತೀಶ್ ಭಂಡಾರಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿಯರಾದ ಚಿತ್ರಕಲಾ ಎಂ ಮತ್ತು ವೀಣಾಲತಾ ಸಿ ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಆರತಿ ಎತ್ತಿ ತಿಲಕವನ್ನು ಇಡುವ ಮೂಲಕ ಎಲ್ಲಾ ಶಿಕ್ಷಕ ವೃಂದದವರು ಸಾಮೂಹಿಕವಾಗಿ ಶುಭ ಹಾರೈಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here