ಪುತ್ತೂರು:ಪುತ್ತೂರು-ಬೆಟ್ಟಂಪಾಡಿ-ಕೊರಿಂಗಿಲ-ನುಳಿಯಾಲು-ತಂಬುತ್ತಡ್ಕ-ರೆಂಜ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವನ್ನು ನ.25ರಂದು ಊರ ನಾಗರೀಕರು ಹಾಗೂ ಫಲಾನುಭವಿಗಳು ಸ್ವಾಗತಿಸಿ, ಸಾಂಕೇತಿಕವಾಗಿ ಉದ್ಘಾಟಿಸಿದರು.
ಹಿಂದಿನ ಶಾಸಕ ಸಂಜೀವ ಮಠಂದೂರುರವರ ಪ್ರಸ್ತಾವಣೆಯಂತೆ ಸಂಸದ ನಳಿನ್ ಕುಮಾರ್ ಕಟೀಲ್‌ರವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಂಜೂರುಗೊಳಿಸಿದ ರೂ.7.3೦ ಕೋಟಿ ಅನುದಾನದಲ್ಲಿ ಕೊರಿಂಗಿಲ, ಕಕ್ಕೂರು, ಆನಡ್ಕ, ನುಳಿಯಾಲು, ನಿಡ್ಪಳ್ಳಿ, ತಂಬುತ್ತಡ್ಕ ಮೂಲಕ ಸಂಚರಿಸುವ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಂಡು 2022ರ ಮೇ. ತಿಂಗಳಿನಲ್ಲಿ ಉದ್ಘಾಟನೆಗೊಂಡು ಸಂಚಾರಕ್ಕೆ ಮುಕ್ತಗೊಂಡಿತ್ತು. ಇದೇ ರಸ್ತೆಯಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿಗೆ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿರುವ ಶಾಸಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮಾಡಿದ ಶಿಪಾರಸ್ಸಿನಂತೆ ಬಸ್ ಸಂಚಾರ ಪ್ರಾರಂಭಗೊಂಡಿದ್ದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿದ್ದು ನಿಡ್ಪಳ್ಳಿ-ಬೆಟ್ಟಂಪಾಡಿ ಎರಡು ಗ್ರಾಮಗಳ ಬೆಸುಗೆಗೆ ಸಹಕಾರಿಯಾಗಲಿದೆ.
ನೂತನ ಬಸ್ ಸೌಲಭ್ಯವನ್ನು ಹಿರಿಯರಾದ ಚಂದ್ರಶೇಖರ ಭಟ್ ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. ನಿಡ್ಪಳ್ಳಿ ಗ್ರಾ.ಪಂ ಅಧ್ಯಕ್ಷ ವೆಂಕಟರಮಣ ಬೋರ್ಕರ್, ಬೆಟ್ಟಂಪಾಡಿ ಗ್ರಾ.ಪಂ ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ಮೊಯಿದು ಕುಂಞಿ, ಗಂಗಾಧರ ಗೌಡ, ವಿನೋದ್ ರೈ ಗುತ್ತು, ಪಾರ್ವತಿ, ಮಹಾಲಿಂಗ ನಾಯ್ಕ, ಪ್ರಮುಖರಾದ ಚಂದ್ರನ್ ಮಣಿಯಾಣಿ ತಲೆಪ್ಪಾಡಿ, ಅಬೂಬಕ್ಕರ್ ಕೊರಿಂಗಿಲ, ಶಿವಪ್ರಸಾದ್ ರೈ ನುಳಿಯಾಲು, ಸನತ್ ರೈ ಸೇರಿದಂತೆ ಹಲವು ಮಂದಿ ನಾಗರೀಕರು ಹಾಗೂ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಯಪ್ರಕಾಶ್ ರೈ ಚೆಲ್ಯಡ್ಕ ಸ್ವಾಗತಿಸಿ, ಲಿಂಗಪ್ಪ ಗೌಡ ಕಕ್ಕೂರು ವಂದಿಸಿದರು.